×
Ad

ಮತದಾರರ ಚೀಟಿಗೆ ಆಂದೋಲನ

Update: 2017-07-15 18:10 IST

ಬೆಂಗಳೂರು, ಜು.15: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಸಂಬಂಧ ಜು.31ರವರೆಗೆ ವಿಶೇಷ ಆಂದೋಲನವನ್ನು ಏರ್ಪಡಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ 18 ರಿಂದ 19 ವರ್ಷ ವಯೋಮಿತಿ ಯುವ ಮತದಾರರ ಸಂಖ್ಯೆ ಕೇವಲ 27,500 ಮಾತ್ರವೇ ಇದೆ. ವಾಸ್ತವವಾಗಿ ಈ ಸಂಖ್ಯೆ 2,25,000 ಇರಬೇಕು. ಹಾಗಾಗಿ, ಶಾಲಾ ಕಾಲೇಜುಗಳಲ್ಲಿ ವಿಶೇಷ ಕ್ಯಾಂಪ್‌ಗಳನ್ನು ನಡೆಸುವ ಮೂಲಕ ಯುವಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಯತ್ನ ನಡೆಸಲಾಗಿದೆ ಎಂದರು.

ನಗರದ ಪ್ರತಿ ಕಾಲೇಜುಗಳಲ್ಲೂ ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಫಾರಂ ನಂ.6 ಅರ್ಜಿಯನ್ನು ಕಾಲೇಜಿನ ಯುವಕರಿಗೆ ವಿತರಿಸಲಾಗುವುದು. ಮರುದಿನ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ತಂದು ಕಾಲೇಜಿನ ಆವರಣದಲ್ಲಿರುವ ಬಾಕ್ಸ್‌ನಲ್ಲಿ ಹಾಕುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 2015-16 ರಿಂದ ಈವರೆಗೆ ಮರಣ ಹೊಂದಿದವರ ವ್ಯಕ್ತಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿಲ್ಲ. ಸುಮಾರು 65,635 ಮಂದಿ ಮರಣ ಹೊಂದಿದ್ದಾರೆ ಎಂದು ಗುರುತಿಸಲಾಗಿದೆ. ಪ್ರಸ್ತುತ ಒಟ್ಟು 84,97,192 ರಷ್ಟು ಮತದಾರರಿದ್ದು, ಈ ಪೈಕಿ 44,61,725 ರಷ್ಟು ಪುರುಷ ಮತದಾರರು ಮತ್ತು 40,35,467 ರಷ್ಟು ಮಹಿಳಾ ಮತದಾರರಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News