ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ: ಪ್ಯಾರಿಸ್ ಇತಿಹಾಸಕಾರ ಮೋರ್

Update: 2017-07-16 06:26 GMT

ಚೆನ್ನೈ, ಜು.16: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿರಲಿಲ್ಲ. 1947ರಲ್ಲೂ ಅವರು ಜೀವಂತವಾಗಿದ್ದರು ಎಂದು ಪ್ಯಾರಿಸ್ ಮೂಲದ ಇತಿಹಾಸಕಾರ ಜೆ.ಬಿ.ಪಿ. ಮೋರ್ ಕಂಡುಕೊಂಡಿದ್ದಾರೆ.

ವಿಮಾನ ಅಪಘಾತದಲ್ಲಿ ಬೋಸ್ ಮೃತಪಟ್ಟಿರಲಿಲ್ಲ. 1947ರಲ್ಲೂ ಅವರು ಜೀವಂತವಾಗಿದ್ದರು ಎಂದು 1947 ಡಿಸೆಂಬರ್ 11ರ ಫ್ರೆಂಚ್ ಗುಪ್ತ ಸೇವೆ ವರದಿಯಲ್ಲಿದೆ ಎಂದವರು ಹೇಳಿದ್ದಾರೆ.

“ತೈವಾನ್ ನ ಯಾವ ದಾಖಲೆಗಳಲ್ಲೂ ಸುಭಾಷ್ ಚಂದ್ರ ಬೋಸ್ ವಿಮಾನ ಅವಘಡದಲ್ಲಿ ಮೃತಪಟ್ಟಿದ್ದಾರೆ ಎಂದು ದಾಖಲಿಸಲ್ಪಟ್ಟಿಲ್ಲ. 1947ರ ಡಿಸೆಂಬರ್ ವರೆಗೆ ಬೋಸ್ ಇದ್ದ ಬಗ್ಗೆ ತಿಳಿದಿಲ್ಲ ಎಂದು ವರದಿ ಇದೆ” ಎಂದು ಮೋರ್ ಹೇಳಿದ್ದಾರೆ.

ರಹಸ್ಯ ದಾಖಲೆಗಳು ವರದಿ ಮಾಡಿರುವಂತೆ ಇಂಡೋಚೀನಾದಿಂದ ಅವರು ಪರಾರಿಯಾಗಿದ್ದರು. 1945ರ ಆಗಸ್ಟ್ 18ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ಬೋಸ್ ಮೃತಪಟ್ಟಿರಲಿಲ್ಲ. ಡಿಸೆಂಬರ್ 11ರವರೆಗೆ ಅವರ ಮಾಹಿತಿ ಇರಲಿಲ್ಲ. ಆದರೆ ಅವರು 1947ರಲ್ಲಿ ಮೃತಪಟ್ಟಿರಲಿಲ್ಲ. ಬದಲಾಗಿ, ಎಲ್ಲೋ ಜೀವಂತವಾಗಿದ್ದರು” ಎಂದು ಮೋರ್ ಹೇಳಿದ್ದಾರೆ.

ಸುಭಾಷ್  ಚಂದ್ರ ಬೋಸ್ ಸಾವಿನ ರಹಸ್ಯಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತ ಸರಕಾರ 3 ಆಯೋಗಗಳನ್ನು ನೇಮಿಸಿತ್ತು. ಇದರಲ್ಲಿ ಶಾ ನವಾಝ್ ಕಮಿಟಿ ಹಾಗೂ ಖೋಸ್ಲಾ ಆಯೋಗ 1945ರ ಆಗಸ್ಟ್ 18ರಂದು ನಡೆದ ವಿಮಾನ ಅವಘಡದಲ್ಲಿ ಬೋಸ್ ಮೃತಪಟ್ಟಿರುವುದಾಗಿ ಹೇಳಿತ್ತು. ಆದರೆ 1999ರ ಮುಖರ್ಜಿ ಆಯೋಗ ಸುಭಾಸ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂದಿತ್ತು. ಆದರೆ ಸರಕಾರ ಮುಖರ್ಜಿ ಆಯೋಗದ ಸಂಶೋಧನೆಯನ್ನು ತಿರಸ್ಕರಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News