×
Ad

ಅವಕಾಶಗಳ ಸದುಪಯೋಗದಿಂದ ಮನ್ನಣೆ ಪ್ರಾಪ್ತಿ: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್

Update: 2017-07-16 19:09 IST

ಬೆಂಗಳೂರು, ಜು. 16: ಸಮಾಜದಲ್ಲಿ ಕೆಟ್ಟ ಕೆಲಸ ಮಾಡಿ ಅಪಕೀರ್ತಿಗಳಿಸುವ ಬದಲು ಒಳ್ಳೆಯ ಕೆಲಸ ಮಾಡಿ ಆದರ್ಶರಾಗಬೇಕು. ಆ ಒಳ್ಳೆಯ ಕೆಲಸಗಳು ಸಾವಿನ ನಂತರವೂ ನಮ್ಮನ್ನು ಜೀವಂತವಾಗಿ ಇರಿಸುವಂತಿರಬೇಕು ಎಂದು ಲೋಕಾಯುಕ್ತ ಪಿ.ವಿಶ್ವನಾಥ್ ಶೆಟ್ಟಿ ತಿಳಿಸಿದ್ದಾರೆ.

ರವಿವಾರ ನಗರದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಸಭಾಂಗಣದಲ್ಲಿ ಅನಂತ ಜ್ಯೋತಿ ಟ್ರಸ್ಟ್ ಆಯೋಜಿಸಿದ್ದ ಡಾ.ಕೆ.ಪಿ.ಪುತ್ತೂರಾಯ ಅವರು ‘ಶುಭ ಚಿಂತನೆ’ ಶೀರ್ಷಿಕೆಯಡಿ ಹೊರ ತಂದಿರುವ ಐದು ಧ್ವನಿ ಸಾಂದ್ರಿಕೆ (ಸಿ.ಡಿ) ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನದಲ್ಲಿ ಪ್ರತಿಯೊಬ್ಬರಿಗೂ ಸದಾವಕಾಶಗಳು ಸಿಗುತ್ತವೆ. ಸಿಕ್ಕ ಅವಕಾಶಗಳನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದುರ ಮೇಲೆ ಒಳಿತು ಹಾಗೂ ಕೆಡಕು ನಿರ್ಧಾರವಾಗುತ್ತದೆ. ಆ ಅವಕಾಶಗಳನ್ನು ಒಳ್ಳೆಯದರ ಕಡೆ ಬಳಸಿಕೊಂಡರೆ ಸಮಾಜದಲ್ಲಿ ಜನ ಮನ್ನಣೆಯ ಜೊತೆಗೆ ಗೌರವ ಲಭಿಸಲಿದೆ ಎಂದರು.
ಪ್ರತಿಯೊಬ್ಬರು ಸಮಾಜದಿಂದ ಹಲವು ರೀತಿಯ ಕೊಡುಗೆ ಪಡೆದು ಬೆಳೆದಿರುತ್ತೇವೆ. ಅವಕಾಶಗಳು ಸಿಕ್ಕಾಗ ಒಳ್ಳೆಯ ಕೆಲಸಗಳ ಮೂಲಕ ಬೆಳವಣಿಗೆಗೆ ಕಾರಣವಾದ ಸಮಾಜಕ್ಕೆ ನಾವು ಕೊಡುಗೆ ನೀಡಬೇಕು. ಡಾ.ಕೆ.ಪಿ.ಪುತ್ತೂರಾಯರು ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, ಕೆ.ಪಿ.ಪುತ್ತೂರಾಯರು ಈ ಸಿ.ಡಿ.ಯಲ್ಲಿ ಸಂಸಾರದ ಎಲ್ಲ ಕೋನಗಳನ್ನು ಪ್ರಸ್ತಾಪಿಸಿದ್ದಾರೆ. ಸಂಸಾರದಲ್ಲಿ ಬಂಧ ಇರಬೇಕು, ಬಂಧನ ಇರಬಾರದು ಎಂದು ಸರಳವಾಗಿ ಹೇಳಿದ್ದಾರೆ. ದಂಪತಿಯ ಹೊಂದಾಣಿಕೆ ಬಗ್ಗೆ ತಿಳಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಸಿ.ಡಿ.ಗಳ ಮೂಲಕ ಮಾನಸಿಕ ಕಾಯಿಲೆಗೆ ಔಷಧಿ ನೀಡಿದ್ದಾರೆ. ಇಂತಹ ವೌಲ್ಯಗಳು ಶೈಕ್ಷಣಿಕ ಪಠ್ಯಕ್ಕೆ ಸೇರಬೇಕು ಎಂದು ಅಭಿಪ್ರಾಯಪಟ್ಟರು.

ನಿವೃತ್ತ ಲೋಕಾಯುಕ್ತ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, ಡಾ.ಕೆ.ಪಿ.ಪುತ್ತೂರಾಯರು ಈ ಸಮಾಜಕ್ಕೆ ದೊರತೆ ಕೊಡುಗೆ. ಬದುಕಿನ ಮೌಲ್ಯಗಳನ್ನು ಸಾರುವ ಉಪನ್ಯಾಸ, ಭಾಷಣಗಳ ಮೂಲಕ ಮಾನಸಿಕ ಚಿಕಿತ್ಸೆ ನೀಡುತ್ತಿದ್ದಾರೆ. ನುಡಿದಂತೆ ದಂಪತಿ ಮಾದರಿ ಬದುಕು ನಡೆಸುತ್ತಿದ್ದಾರೆ. ಇವರ ಸೇವೆ ಸಮಾಜದಲ್ಲಿ ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

ಗೇಟ್ ಹಾರಿದ ಲೋಕಾಯುಕ್ತ:  ಡಾ.ಕೆ.ಪಿ.ಪುತ್ತೂರಾಯರ ಧ್ವನಿ ಸಾಂದ್ರಿಕೆ ಬಿಡುಗಡೆ ಸಂದರ್ಭದಲ್ಲಿ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ಅವರ ಆರ್.ಟಿ.ನಗರ ನಿವಾಸದಲ್ಲಿ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸ್ ಕಾನ್ಸ್‌ಟೆಬಲ್ ಮಂಜು ತರೀಕೆರೆ ರಚಿತ ‘ಉಳಿದವರು ಕಾಣದಂತೆ’ ಕಥನ ಕೃತಿಯನ್ನು ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರುಲೋಕಾರ್ಪಣೆಗೊಳಿಸಿದರು.

ಈ ಬಗ್ಗೆ ಪ್ರಶ್ನಿಸಿದಾಗ, ಮನೆಯೊಳಗೆ ಇರಬೇಕೆಂದು ಭಾವಿಸಿ ಗೇಟ್‌ಗೆ ಬೀಗ ಹಾಕಿಕೊಂಡು ಬರವಣಿಗೆಯಲ್ಲಿ ತೊಡಗಿದ್ದೆ ಎಂದು ಮಂಜು ಹೇಳಿದರು. ಆದರೆ ಅವರು ಪುಸ್ತಕ ಬರೆಯುತ್ತಿದ್ದಾರೆ ಎಂದು ಅಂದುಕೊಂಡಿರಲಿಲ್ಲ.ಇಂದು ಪುಸ್ತಕ ಬಿಡುಗಡೆಯಾಗುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್,ಪತ್ರಕರ್ತ ರವಿ ಹೆಗಡೆ, ಚಿಂತಕ ಡಾ.ಕೆ.ಪಿ.ಪುತ್ತೂರಾಯ, ಪತ್ನಿ ಜ್ಯೋತಿ ಪುತ್ತೂರಾಯ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News