ತಮಿಳುನಾಡಿನ ಶಾಸಕರ ಟೇಬಲ್‌ನಿಂದಲೂ ಮರೆಯಾದ ಜಯಲಲಿತಾರ ಭಾವಚಿತ್ರ!

Update: 2017-07-19 07:18 GMT

 ಚೆನ್ನೈ, ಜು.19: ರಾಜ್ಯ ವಿಧಾನಸಭೆಯಲ್ಲಿ ಎಐಎಡಿಎಂಕೆ ಸಚಿವರುಗಳು ಹಾಗೂ ಶಾಸಕರುಗಳ ಟೇಬಲ್‌ನ ಮುಂದೆ ಸದಾ ಕಾಲ ಇರುತ್ತಿದ್ದ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾರ ಫೋಟೊಗಳು ಇದೀಗ ಕಾಣೆಯಾಗಿದೆ.

 ಸಾಮಾನ್ಯವಾಗಿ ಎಲ್ಲ ಟೇಬಲ್‌ಗಳಲ್ಲಿ ಜಯಲಲಿತಾರ ಫೋಟೊವನ್ನು ಹೆಮ್ಮೆಯ ಸಂಕೇತವಾಗಿ ಇಡಲಾಗುತ್ತಿತ್ತು. ಆಡಳಿತಾರೂಢ ಪಕ್ಷದ ಶಾಸಕರು ತುಂಬಾ ಎಚ್ಚರಿಕೆಯಿಂದ ಇದನ್ನು ಕಾಪಾಡುತ್ತಿದ್ದರು. ಆದರೆ, ಇತ್ತೀಚೆಗೆ ನಡೆದ ರಾಜ್ಯ ಅಧಿವೇಶನದಲ್ಲಿ ಜಯಲಲಿತಾರ ಫೋಟೊಗಳು ನಾಪತ್ತೆಯಾಗಿವೆ.

ಆಡಳಿತಾರೂಢ ಪಕ್ಷದ ಶಾಸಕರ ಡೈರಿಗಳಲ್ಲಿ ಜಯಲಲಿತಾ ಚಿತ್ರಗಳಿರುತ್ತಿದ್ದವು. ಮಾಧ್ಯಮಗಳ ಕ್ಯಾಮರಾ ಕಣ್ಣು ಅದರತ್ತ ಬೀಳುತ್ತಿತ್ತು. ಎರಡು ತಿಂಗಳ ಹಿಂದೆ ನಡೆದ ಬಜೆಟ್ ಅಧಿವೇಶನದ ವೇಳೆಯೇ ಜಯಲಲಿತಾರ ಫೋಟೊಗಳು ನಿಧಾನವಾಗಿ ಕಾಣೆಯಾಗತೊಡಗಿದ್ದ್ದವು. ಇದೀಗ ಯಾವ ಟೇಬಲ್‌ನಲ್ಲೂ ಜಯಲಲಿತಾರ ಚಿತ್ರ ಕಾಣ ಸಿಗುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News