ಮೂವರು ವಿದೇಶಿ ಪ್ರಜೆಗಳ ಬಂಧನ

Update: 2017-07-21 13:53 GMT

ಬೆಂಗಳೂರು, ಜು.21: ವೀಸಾ ಅವಧಿ ಮುಗಿದಿದ್ದರೂ, ಭಾರತದಲ್ಲಿ ಕಾನೂನು ಬಾಹಿರವಾಗಿ ನೆಲೆಸಿದ್ದ ನೈಜೀರಿಯಾ ಪ್ರಜೆ ಸೇರಿ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ವೀಸಾ ನಿಯಮಗಳನ್ನು ಉಲ್ಲಂಘಿಸಿ ದೇಶದಲ್ಲಿ ನೆಲೆಸಿರುವ ಆರೋಪದ ಮೇಲೆ ಇಮುಯಲ್ ಉಜ್ವಾನ ವೋಕ್ರೋ(39) ಎಂಬಾತನನ್ನು ಬಂಧಿಸಿ, ಮೂರು ಮೊಬೈಲ್, 2 ಸಾವಿರ ರೂ. ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅದೇ ರೀತಿ, ಮಾದಕ ವಸ್ತು ಮಾರಾಟ ಆರೋಪದ ಮೇಲೆ ಮಕೂಕೋ(29), ಪ್ಯಾಟ್ರಿಕ್ ಮೋಜಿ(29) ಎಂಬುವರನ್ನು ಬಂಧಿಸಿ, 50 ಸಾವಿರ ರೂ.ವೌಲ್ಯದ 2.5 ಮಾದಕ ವಸ್ತು ವಶಕ್ಕೆ ಪಡೆದು ಇಲ್ಲಿನ ಕೆಆರ್‌ಪುರಂ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News