ರಾಜ್ಯಕ್ಕೆ ಪ್ರತ್ಯೇಕ ಧ್ವಜ: ಕ್ರೈಸ್ತರ ಸ್ವಾಗತ
ಬೆಂಗಳೂರು, ಜು.22: ಕರ್ನಾಟಕದ ಧ್ವಜವನ್ನು ಮರು ವಿನ್ಯಾಸಗೊಳಿಸುವ ಸಲುವಾಗಿ ರಾಜ್ಯ ಸರಕಾರ ಸಮಿತಿ ನೇಮಕ ಮಾಡಿರುವುದನ್ನು ಅಖಿಲ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಸ್ವಾಗತಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್, ಕನ್ನಡಪರ ಹೋರಾಟಗಾರ ರಾಮಮೂರ್ತಿಯ ನೇತೃತ್ವದಲ್ಲಿ ಕೆಂಪು-ಹಳದಿ ಬಣ್ಣದ ಕನ್ನಡ ಧ್ವಜವನ್ನು ನಾಡಿನ ಜನರು ಸ್ವಾಭಿಮಾನದ ಸಂಕೇತವಾಗಿ ಸ್ವೀಕರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ನಾಡಿನ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರತ್ಯೇಕ ಧ್ವಜವನ್ನು ಮಾಡುವುದರಿಂದ ರಾಷ್ಟ್ರೀಯತೆಗೆ ಭಂಗ ಬರುವುದಿಲ್ಲ ಎಂದು ಹೇಳಿದರು.
ಶಿವಸೇನೆ ಹೇಳಿಕೆಗೆ ಖಂಡನೆ: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ನಿಲುವನ್ನು ಖಂಡಿಸಿ ಸರಕಾರವನ್ನು ವಜಾ ಗೊಳಿಸಬೇಕು ಎಂದು ಹೇಳಿಕೆ ನೀಡುತ್ತಿರುವ ಶೀವಸೇನೆ ಹೇಳಿಕೆಯನ್ನು ರಫಾಯಲ್‌ರಾಜ್ ಖಂಡಿಸಿದರು. ಇದು ಕನ್ನಡಿಗರನ್ನು ಅವಮಾನಿಸುವಂತಹ ಕೃತ್ಯವಾಗಿದೆ ಎಂದು ಹೇಳಿದರು.