ದೌರ್ಜನ್ಯ ಖಂಡಿಸಿ ಕಾರ್ಮಿಕರ ಮುಷ್ಕರ
ಬೆಂಗಳೂರು, ಜು.24: ಬಿಡದಿಯಲ್ಲಿರುವ ಮದರ್‌ಸನ್ ಆಟೋಮೋಟಿವ್ ಟೆಕ್ನಾಲಜಿಸ್ ಮತ್ತು ಎಂಜಿನಿಯರಿಂಗ್ ಕಾರ್ಖಾನೆಯ ಆಡಳಿತ ವರ್ಗದವರು ಕಾರ್ಮಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ನಾಳೆ(ಜು.25) ಕಾರ್ಖಾನೆಯ ಎದುರು ಮುಷ್ಕರ ಹಮ್ಮಿಕೊಳ್ಳಲಾಗಿದೆ. ನಿಯೋಜನೆ ನೆಪದಲ್ಲಿ 9 ಕಾರ್ಮಿಕರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಿ, ಅನಂತರ ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ, ಯಾವುದೇ ಕಾರಣವಿಲ್ಲದೆ 13 ಜನ ಕಾರ್ಮಿಕರನ್ನು ಕೆಲಸದಿಂದ ಅಮಾನತು ಮಾಡಿದ್ದಾರೆ. ಇಷ್ಟಲ್ಲದೆ, ಆಡಳಿತ ಮಂಡಳಿ ನೀಡುವ ಬೆಳಗಿನ ಉಪಾಹಾರದ ಗುಣಮಟ್ಟ ಸರಿಯಿಲ್ಲ ಎಂದು ಕೇಳಿದ್ದಕ್ಕೆ 12 ಜನ ಕಾರ್ಮಿಕರ ಕೈಗಳನ್ನು ಕತ್ತರಿಸಿರುವಂತಹ ಅಮಾನುಷವಾದ ಘಟನೆಗಳು ನಡೆದಿವೆ.
ಆಡಳಿತ ಮಂಡಳಿಯು ಕಂಪೆನಿ ಕಾನೂನು, ಕಾರ್ಮಿಕ ಕಾನೂನು ಮತ್ತು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿ ಕಾರ್ಮಿಕರ ವೆುೀಲೆ ದಬ್ಬಾಳಿಕೆ ನಡೆಸುತ್ತಿದೆ. ಕಾರ್ಮಿಕರನ್ನು ಅಮಾನುಷವಾಗಿ ನಡೆದುಕೊಳ್ಳುತ್ತಿದೆ. ಇದನ್ನು ಖಂಡಿಸಿ ಬಿಡದಿ ಕೈಗಾರಿಕಾ ಪ್ರದೇಶದ ಟೆಯೊಟೋ ಕಿರ್ಲೊಸ್ಕರ್ ಮೋಟಾರ್ ಸಮೂಹ ಸಂಸ್ಥೆಗಳ ಕಾರ್ಮಿಕ ಸಂಘಟನೆಗಳೆಲ್ಲ ಒಟ್ಟಾಗಿ ಕಂಪೆನಿಯ ಎದುರು ಒಂದು ದಿನದ ಮುಷ್ಕರ ಹಮ್ಮಿಕೊಳ್ಳಲಾಗಿದೆ.