ಕಾಮನ್‌ವೆಲ್ತ್ ಯೂತ್ ಗೇಮ್ಸ್: ಸಚಿನ್‌ಗೆ ಸ್ವರ್ಣ

Update: 2017-07-24 18:42 GMT

ಹೊಸದಿಲ್ಲಿ, ಜು.24: ವಿಶ್ವ ಯೂತ್ ಚಾಂಪಿಯನ್ ಸಚಿನ್ ಸಿವಾಚ್ ಕಾಮನ್‌ವೆಲ್ತ್ ಯೂತ್ ಗೇಮ್ಸ್‌ನಲ್ಲಿ ಸ್ವರ್ಣದ ಪದಕ ಗೆದ್ದುಕೊಂಡರು. ಗೇಮ್ಸ್‌ನಲ್ಲಿ ಈ ಸಾಧನೆ ಮಾಡಿದ ಭಾರತದ ಏಕೈಕ ಬಾಕ್ಸರ್ ಎನಿಸಿಕೊಂಡರು.

ಬಹಾಮಸ್‌ನಲ್ಲಿ ನಡೆದ ಯೂತ್ ಗೇಮ್ಸ್‌ನ ಲೈಟ್ ಫ್ಲೈವೇಟ್(49 ಕೆಜಿ) ವಿಭಾಗದ ಫೈನಲ್‌ನಲ್ಲಿ ವೆಲ್ಶ್ ಬಾಕ್ಸರ್ ಜೇಮ್ಸ್ ನಥಾನ್ ಪ್ರೊಬರ್ಟ್‌ರನ್ನು 4-1 ರಿಂದ ಮಣಿಸಿದ ಸಚಿನ್ ಚಿನ್ನ ಗೆದ್ದುಕೊಂಡರು. ಕಳೆದ ವರ್ಷ ವಿಶ್ವ ಯೂತ್ ಕೂಟದಲ್ಲಿ ಸಚಿನ್ ಚಿನ್ನ ಜಯಿಸಿದ್ದರು. ಬಾಲಕಿಯರ ಪೈಕಿ 60 ಕೆಜಿ ಲೈಟ್‌ವೇಟ್ ವಿಭಾಗದಲ್ಲಿ ಜಾನಿ ಬೆಳ್ಳಿ ಪದಕವನ್ನು ಜಯಿಸಿದರು. ಫೈನಲ್‌ನಲ್ಲಿ ಆಸ್ಟ್ರೇಲಿಯದ ಎಲ್ಲಾ ಜಾಡ್ ಬೂಟ್ ವಿರುದ್ಧ ಸೋತಿರುವ ಜಾನಿ ಬೆಳ್ಳಿಗೆ ತೃಪ್ತಿಪಟ್ಟರು. ಜಾನಿ ಬಾಲಕಿಯರ ವಿಭಾಗದಲ್ಲಿ ಪದಕ ಗೆದ್ದ ಏಕೈಕ ಬಾಕ್ಸರ್ ಎನಿಸಿಕೊಂಡರು. ಯೂತ್ ಗೇಮ್ಸ್‌ನಲ್ಲಿ ಒಟ್ಟು 103 ಬಾಕ್ಸರ್‌ಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News