ಒರ್ಮಿಲಾ ದೇವಿಗೆ ಚಿನ್ನ

Update: 2017-07-24 18:45 GMT

ಹೊಸದಿಲ್ಲಿ, ಜು.24: ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಏಷ್ಯನ್ ಯೂತ್ ಹಾಗೂ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಕೊನ್ಸಮ್ ಒರ್ಮಿಲಾ ದೇವಿ ಚಿನ್ನದ ಪದಕ ಬಾಚಿಕೊಂಡರು.

ಮಣಿಪುರದ ವೇಟ್‌ಲಿಫ್ಟರ್ ಒರ್ಮಿಲಾ ದೇವಿ 44 ಕೆಜಿ ತೂಕ ವಿಭಾಗದಲ್ಲಿ 56 ಕೆ.ಜಿ. ಸ್ನಾಚ್ ಹಾಗೂ 70 ಕೆಜಿ ಕ್ಲೀನ್ ಹಾಗೂ ಜರ್ಕ್ ಸಹಿತ ಒಟ್ಟು 126 ಕೆಜಿ ತೂಕವನ್ನು ಎತ್ತುವ ಮೂಲಕ ಅಗ್ರ ಸ್ಥಾನ ಪಡೆದರು ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News