×
Ad

ಕಾಫಿ ಡೇ ಸಿಬ್ಬಂದಿ ಆತ್ಮಹತ್ಯೆ

Update: 2017-07-25 18:40 IST

ಬೆಂಗಳೂರು, ಜು.25: ಉದ್ಯೋಗದಲ್ಲಿ ಭಡ್ತಿ ಸಿಗದ ಕಾರಣದಿಂದ ನೊಂದು ಕಾಫಿಡೇ ಸಿಬ್ಬಂದಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಮಗಳೂರು ಮೂಲದ ನಾರಾಯಣಪುರದ ಪ್ರಮೋದ್ ಆತ್ಮಹತ್ಯೆಗೆ ಮಾಡಿಕೊಂಡಿರುವ ಕಾಫಿಡೇ ಸಿಬ್ಬಂದಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 ಪ್ರಮೋದ್ 11 ವರ್ಷಗಳಿಂದ ಫಿನಿಕ್ಸ್‌ಮಾಲ್‌ನ ಕಾಫಿಡೇನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಉದ್ಯೋಗದಲ್ಲಿ ಭಡ್ತಿ ನೀಡುವಂತೆ ಮೇಲಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾನೆ. ಆದರೆ, ಇದುವರೆಗೂ ಆತನಿಗೆ ಭಡ್ತಿ ನೀಡದ ಹಿನ್ನೆಲೆಯಲ್ಲಿ ಮನನೊಂದು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News