×
Ad

ಆನ್‌ಲೈನ್ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಲಿ

Update: 2017-07-25 21:38 IST

ಬೆಂಗಳೂರು, ಜು.25: ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಮುನ್ನಾ ಸಂಬಂಧಪಟ್ಟ ವೆಬ್‌ಸೈಟ್ ವಿಶ್ವಾಸಾರ್ಹತೆ ಹೊಂದಿದೆಯೇ ಎನ್ನುದನ್ನು ಖಚಿತ ಪಡಿಸಿಕೊಳ್ಳಬೇಕೆಂದು ಸಿಐಡಿ ಎಡಿಜಿಪಿ ಪ್ರತಾಪ್‌ರೆಡ್ಡಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಯಾವುದೇ ವೆಬ್‌ಸೈಟ್ ಎಸ್‌ಎಸ್‌ಎಲ್ ಸರ್ಟಿಫಿಕೇಟನ್ನು ಪಡೆದಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬೇಕು. ಅದೇರೀತಿ, ವೆಬ್‌ಸೈಟ್‌ನಲ್ಲಿ ಹೆಚ್ಚು ಬಡ್ಡಿ ನೀಡುವುದಾಗಿ ಅಥವಾ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರುವುದಾಗಿ ಜಾಹೀರಾತು ನೀಡಿದರೆ ಅದನ್ನು ನಂಬಿ ವಂಚನೆಗೊಳಗಾಗದೇ ಅದರ ಪೂರ್ವಾಪರಗಳನ್ನು ಪರಿಶೀಲಿಸಿ ಮುಂದುವರೆಯಬೇಕೆಂದು ಅವರು ಹೇಳಿದರು.

 ಬ್ಯಾಂಕುಗಳು ಸಹ ಗ್ರಾಹಕರ ಸಂಪೂರ್ಣ ಮಾಹಿತಿ ಇಲ್ಲದೆ ಯಾವುದೇ ಖಾತೆ ತೆರೆಯಲು ಅವಕಾಶ ನೀಡಬಾರದು. ಆನ್‌ಲೈನ್ ವಂಚನೆಯಲ್ಲಿ ಬಂಧಿತರಾದ ನಾಲ್ವರು ಆರೋಪಿಗಳು ನಕಲಿ ಪಾನ್‌ಕಾರ್ಡ್ ಬಳಸಿ ಖಾತೆಗೆ ತೆರೆದಿದ್ದಾರೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಎಷ್ಟಿದೆ ಎಂಬುದನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಹಣ ಹೂಡಿಕೆ ಮಾಡುವ ಮುನ್ನ ಸೆಬಿ ಹಾಗೂ ಆರ್‌ಬಿಐಗಳಲ್ಲಿ ಕಂಪೆನಿಯು ನೋಂದಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಾಮರ್ಸ್ ವೆಬ್‌ಸೈಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು, ಕಾರ್ಡ್ ಮೂಲಕ ವ್ಯವಹಾರ ಮಾಡಬೇಕಾದಾಗ ಸ್ಕಿಮ್ಮಿಂಗ್ ಉಪಕರಣಗಳ ಮೂಲಕ ಮಾಹಿತಿ ಕದಿಯಲಾಗುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ದೂರು ನೀಡಿ

ವೆಬ್‌ಸೈಟ್‌ಗಳಲ್ಲಿ ಬ್ಯಾಂಕ್‌ನ ವ್ಯವಹಾರಕ್ಕೆ ಸಂಬಂಧಿಸಿದ ವಿವರಗಳನ್ನು ಹಾಕಬಾರದು. ಅದೇ ರೀತಿ, ಸಾರ್ವಜನಿಕರು ಹಣ ಕಳೆದುಕೊಂಡರೆ ಸೈಬರ್ ಕ್ರೈಂ ವಿಭಾಗದ ದೂರವಾಣಿ ಸಂಖ್ಯೆ 080-22094507, 94808 00197, ಇಮೇಲ್ ವಿಳಾಸ ccps.kar@gmail.com ಕ್ಕೆ ದೂರು ನೀಡಬಹುದಾಗಿದೆ ಎಂದು ಸಿಐಡಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News