ಆನೆ ದಂತ ಮಾರಾಟ: ಮೂವರು ಪೊಲೀಸರ ಬಲೆಗೆ
Update: 2017-07-26 19:29 IST
ಬೆಂಗಳೂರು, ಜು.26: ಆನೆ ದಂತ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಇಲ್ಲಿನ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೋಮವಾರಪೇಟೆಯ ಎ.ಬಿ.ಧರ್ಮ(35), ಬಸವಣ್ಣ(48), ಹಾಸನ ಮೂಲದ ಮಂಜ(28) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಜು.24 ರಂದು ಮಧ್ಯಾಹ್ನ 12:30 ಸುಮಾರಿಗೆ ಯಶವಂತಪುರ ಬಸ್ ನಿಲ್ದಾಣದಲ್ಲಿ ಆರೋಪಿಗಳು, ಗೋಣಿ ಚೀಲದೊಳಗೆ ಆನೆ ದಂತ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳಿಂದ 13.3 ಕೆಜಿ ಆನೆ ದಂತವನ್ನು ವಶಪಡಿಸಿಕೊಂಡು ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.