ಪಿಎಚ್‌ಡಿ ಪದವಿ ಪ್ರದಾನ

Update: 2017-07-26 14:12 GMT

ಬೆಂಗಳೂರು, ಜು. 26: ರಾಮನಗರದ ಸರಕಾರಿ ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎ.ಗೋಪಾಲ್ ಎಂಬವರು ಮಂಡಿಸಿದ ‘ಡಾಕ್ಟ್ರಿರಿನ್ ಆಫ್ ಸಪರೇಷನ್‌ ಆಪ್ ಪವರ್ಸ್‌-ಎ ಕಂಪಾರೇಟಿವ್ ಸ್ಟಡಿ ವಿತ್ ರೆೆರನ್ಸ್ ಟು ಯುಕೆ ಅಂಡ್ ಯುಎಸ್‌ಎ ಅಂಡ್ ಇಂಡಿಯಾ’ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂ.ವಿವಿ ಪಿಎಚ್‌ಡಿ ಪದವಿ ನೀಡಿದೆ.

ಗೋಪಾಲ್ ಅವರು ಬೆಂಗಳೂರು ವಿವಿಯ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎನ್.ದಶರಥ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಪದವಿ: ಬೆಂ.ವಿವಿ ಸಮಾಜ ಕಾರ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಎಂ.ನಾಗರಾಜ ನಾಯ್ಕಾ ಇವರು ಮಂಡಿಸಿದ ‘ಸ್ಟ್ರೆಸ್ ಅಂಡ್ ಕೋಪಿಂಗ್ ಸ್ಕಿಲ್ಸ್ ಅಮಾಂಗ್ ದಿ ಎಂಪ್ಲಾಯೀಸ್ ಆಫ್ ಇನ್ಫಾರ್ಮೇಷನ್‌ಟೆಕ್ನಾಲಜಿ(ಐಟಿ) ಇಂಡಸ್ಟ್ರೀಸ್’ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂ.ವಿವಿ ಪಿಎಚ್‌ಡಿ ಪದವಿ ನೀಡಿದೆ.
ಬೆಂಗಳೂರು ವಿವಿ ಸಮಾಜಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ. ಕೋದಂಡರಾಮ ಅವರ ಮಾರ್ಗದರ್ಶನದಲ್ಲಿ ನಾಗರಾಜ ನಾಯ್ಕಾ ಪ್ರಬಂಧ ಮಂಡಿಸಿದ್ದರು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News