ಪ್ರಥಮ ಟೆಸ್ಟ್: ಭಾರತ ಮೊದಲ ಇನಿಂಗ್ಸ್‌ನಲ್ಲಿ 600ಕ್ಕೆ ಆಲೌಟ್

Update: 2017-07-27 10:15 GMT
 ಹಾರ್ದಿಕ್ ಪಾಂಡ್ಯ 50 ರನ್

ಗಾಲೆ, ಜು.27: ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 133.1 ಓವರ್‌ಗಳಲ್ಲಿ 600 ರನ್‌ಗಳಿಗೆ ಆಲೌಟಾಗಿದೆ.

 ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್‌ನಲ್ಲಿ ಚೇತೇಶ್ವರ ಪೂಜಾರ 153 ರನ್(265ಎ, 13ಬೌ), ಅಜಿಂಕ್ಯ ರಹಾನೆ 57 ರನ್, ರವಿಚಂದ್ರನ್ ಅಶ್ವಿನ್ 47 ರನ್, ವೃದ್ಧಿಮಾನ್ ಸಹಾ 16ರನ್, ಹಾರ್ದಿಕ್ ಪಾಂಡ್ಯ 50 ರನ್, ರವೀಂದ್ರ ಜಡೇಜ 15ರನ್, ಮುಹಮ್ಮದ್ ಶಮಿ 30ರನ್ ಗಳಿಸಿ ಔಟಾಗಿದ್ದಾರೆ.

ಉಮೇಶ್ ಯಾದವ್ ಔಟಾಗದೆ 11 ರನ್ ಗಳಿಸಿದರು. ಲಂಕಾದ ಪರ ನುವಾನ್ ಪ್ರದೀಪ್ 132ಕ್ಕೆ 6, ಲಹಿರು ಕುಮಾರ್ 131ಕ್ಕೆ 3 ಮತ್ತು ರಂಗನ್ ಹೆರಾತ್ 159ಕ್ಕೆ 1 ವಿಕೆಟ್ ಪಡೆದರು.

ಮೊದಲ ದಿನದಾಟದಂತ್ಯಕ್ಕೆ ಭಾರತ 90 ಓವರ್‌ಗಳಲ್ಲಿ 3ವಿಕೆಟ್ ನಷ್ಟದಲ್ಲಿ 399 ರನ್ ಗಳಿಸಿತ್ತು. ಚೇತೇಶ್ವರ ಪೂಜಾರ ಔಟಾಗದೆ 144ರನ್(247ಎ, 12ಬೌ) ಮತ್ತು ಅಜಿಂಕ್ಯ ರಹಾನೆ 39 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News