ಡೆನಿಸ್ ಲಿಲ್ಲಿಯ 36 ವರ್ಷಗಳ ದಾಖಲೆಯನ್ನು 'ಔಟ್' ಮಾಡಿದ ಅಶ್ವಿನ್

Update: 2017-07-27 10:40 GMT

ಹೊಸದಿಲ್ಲಿ, ಜು.27: 50 ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಗಳನ್ನು ಪಡೆಯುವ ಮೂಲಕ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಆಸ್ಟ್ರೇಲಿಯಾದ ಬೌಲರ್ ಡೆನಿಸ್ ಲಿಲ್ಲಿಯವರ 36 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಆಡುವ ಮೂಲಕ ಅಶ್ವಿನ್ ತನ್ನ 50ನೆ ಪಂದ್ಯವನ್ನಾಡಿದ್ದು, 275 ವಿಕೆಟ್ ಗಳನ್ನು ಗಳಿಸಿದ್ದಾರೆ. ಈ ಹಿಂದೆ 50 ಪಂದ್ಯಗಳಲ್ಲಿ 262 ವಿಕೆಟ್ ಗಳನ್ನು ಗಳಿಸುವ ಮೂಲಕ ಡೆನಿಸ್ ಲಿಲ್ಲಿ ದಾಖಲೆ ನಿರ್ಮಿಸಿದ್ದರು. ಇದೀಗ 50 ಪಂದ್ಯಗಳಲ್ಲಿ 275 ವಿಕೆಟ್ ಗಳನ್ನು ಗಳಿಸಿರುವ ಅಶ್ವಿನ್ ನೂತನ ದಾಖಲೆ ನಿರ್ಮಿಸಿದ್ದಾರೆ.

ಫೆಬ್ರವರಿಯಲ್ಲಿ 45ನೆ ಟೆಸ್ಟ್ ಪಂದ್ಯವನ್ನು ಆಡಿದ್ದ ಅಶ್ವಿನ್ ಅತೀ ವೇಗದಲ್ಲಿ 250 ವಿಕೆಟ್ ಗಳನ್ನು ಕಬಳಿಸಿ ದಾಖಲೆ ಮಾಡಿದ್ದರು. 300 ವಿಕೆಟ್ ಗಳನ್ನು ತಲುಪಲು ಅಶ್ವಿನ್ ಗೆ ಇನ್ನು ಕೇವಲ 25 ವಿಕೆಟ್ ಗಳ ಅವಶ್ಯಕತೆಯಿದೆ. ಡೆನಿಸ್ ಲಿಲ್ಲಿಯವರು 56  ಪಂದ್ಯಗಳನ್ನಾಡಿ 300 ವಿಕೆಟ್ ಗಳನ್ನು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News