ನಿತೀಶ್ ಕುಮಾರ್ ಗೆ ವಿಶ್ವಾಸಮತ ಗೆಲ್ಲುವ ವಿಶ್ವಾಸ

Update: 2017-07-28 05:32 GMT

ಪಾಟ್ನಾ, ಜು.28:  ಆರನೇ ಬಾರಿಗೆ ಬಿಹಾರ ಮುಖ್ಯ ಮಂತ್ರಿಯಾಗಿ  ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಶುಕ್ರವಾರ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಅವರು  ವಿಶ್ವಾಸ ಮತ ಗೆಲ್ಲುವ ಭರವಸೆ ಹೊಂದಿದ್ದಾರೆ.

ವಿಶ್ವಾಸ ಮತ ಯಾಚನೆಗೆ ಬಿಹಾರ ವಿಧಾನಸಭೆಯಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ರಾಜಕೀಯ ಪಕ್ಷಗಳು ಅಂತಿಮ ಕ್ಷಣದ ಕಸರತ್ತಿನಲ್ಲಿ ತೊಡಗಿವೆ. ತನ್ನ ನೇತೃತ್ವದ ಸರಕಾರದ ಬಹುಮತ ಸಾಬೀತುಪಡಿಸಲು ಮುಖ್ಯ ಮಂತ್ರಿ ನಿತೀಶ್ ಕುಮಾರ್ ವಿಧಾನ ಸಭೆಗೆ ಆಗಮಿಸಿದ್ದಾರೆ.

ಆರ್ ಜೆಡಿ ಮತ್ತು ಕಾಂಗ್ರೆಸ್ ಸದಸ್ಯರು ವಿಧಾನಸಭೆಯ ಬಳಿ  ಪ್ರತಿಭಟನೆ ನಡೆಸಿ ಉಪಮುಖ್ಯ ಮಂತ್ರಿ ಸುಶೀಲ್ ಕುಮಾರ್  ಮೋದಿ ಅವರಿಗೆ ವಿಧಾನಸಭೆ  ಪ್ರವೇಶಿಸದಂತೆ ಅಡ್ಡಿಪಡಿಸಿದರು ಎನ್ನಲಾಗಿದೆ.

ವಿಶ್ವಾಸ ಮತ ಯಾಚನೆಯ ಹಿನ್ನೆಲೆಯಲ್ಲಿ ಆರ್ ಜೆಡಿ ಸದಸ್ಯರು ಗದ್ದಲವನ್ನುಂಟು ಮಾಡುವ ಸಾಧ್ಯತೆ ಇರುವುದರಿಂದ ವಿಧಾನಸಭೆಗೆ ಬಿಗು ಭದ್ರತೆ ಒದಗಿಸಲಾಗಿದೆ.

 243 ಸದಸ್ಯ ಬಲ ಹೊಂದಿರುವ  ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಮತ್ತು ಬಿಜೆಪಿ ಮೈತ್ರಿ ಕೂಟದ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು 122 ಸದಸ್ಯರ ಬೆಂಬಲ ಅಗತ್ಯ. ಆದರೆ ಬಿಜೆಪಿ-ಜೆಡಿಯು ಮೈತ್ರಿಕೂಟಕ್ಕೆ 132  ಸದಸ್ಯರ ಬೆಂಬಲವಿದೆ ಎಂದು  ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News