×
Ad

ಅಧ್ಯಾತ್ಮ ಸಾಧಕರ ಬಡಾವಣೆಯಲ್ಲಿ ಮನೆ ನಿರ್ಮಾಣ: ಮನವಿ ತಿರಸ್ಕರಿಸಿದ ಹೈಕೋರ್ಟ್

Update: 2017-07-29 18:41 IST

ಬೆಂಗಳೂರು, ಜು.29: ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಬೊಮ್ಮಸಂದ್ರ ಗ್ರಾಮದಲ್ಲಿ ಅಧ್ಯಾತ್ಮ ಸಾಧಕರಿಗೆ ಮೀಸಲಾದ ಖಾಸಗಿ ಬಡಾವಣೆಯಲ್ಲಿ ನಿವೃತ್ತ ಎಚ್‌ಎಎಲ್ ಅಧಿಕಾರಿಯೊಬ್ಬರು ಮನೆ ನಿರ್ಮಾಣ ಮಾಡಲು ಸಲ್ಲಿಸಿದ್ದ ಮನವಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಕಟ್ಟಡ ನಿರ್ಮಿಸಲು ಅಗತ್ಯವಾದ ಪರಿಕರ ಸಾಗಿಸುವುದಕ್ಕೆ ಅರಣ್ಯ ಮಧ್ಯದಲ್ಲಿ ಹಾದು ಹೋಗಿರುವ ರಸ್ತೆ ಉಪಯೋಗಕ್ಕೆ ಅನುಮತಿ ನೀಡುವಂತೆ ನಿರ್ದೇಶಿಸಬೇಕು ಎಂದು ಕರ್ನಲ್ ಕೃಷ್ಣನ್‌ದತ್ ಶೆಲ್ಲಿ ಹಾಗೂ ಓಂ ಶಾಂತಿಧಾಮ ವೇದ ಗುರುಕುಲದ ಕಾರ್ಯದರ್ಶಿ ಸತ್ಯವ್ರತ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ. ವೇದಗುರುಕುಲಕ್ಕೆ ಅಂಟಿಕೊಂಡಂತೆ 7ರಿಂದ 8 ಎಕರೆ ಪ್ರದೇಶದಲ್ಲಿ ನಿಸರ್ಗ ನಿಕುಂಜ ನಿರ್ಮಾಣ ಹೆಸರಿನ ಬಡಾವಣೆ ನಿರ್ಮಿಸಲಾಗಿದೆ. ಇಲ್ಲಿ ಅಧ್ಯಾತ್ಮ ಸಾಧಕರಿಗೆ ಮಾತ್ರವೇ ನಿವೇಶನ ನೀಡಲಾಗಿದೆ. ನಿವೃತ್ತ ಸೇನಾಧಿಕಾರಿಯೂ ಆದ ಸ್ಥಳೀಯ ಬಿ.ಅನಂತಪ್ಪ ಇದರ ನಿರ್ಮಾತೃ. ಈಗಾಗಲೇ ಇಲ್ಲಿ ಏಳೆಂಟು ಸಾಧಕರು ನೆಲೆಸಿದ್ದಾರೆ. ಇವರೆಲ್ಲಾ ವೃತ್ತಿಯಲ್ಲಿ ಎಂಜಿನಿಯರ್, ವೈದ್ಯ, ವಕೀಲರಾಗಿದ್ದವರು. ಇಲ್ಲಿ ನಿವೇಶನ ಪಡೆದುಕೊಂಡ ಉತ್ತರ ಪ್ರದೇಶದ ಕರ್ನಲ್ ಕೃಷ್ಣನ್ ದತ್ ಶೆಲ್ಲಿ(ನಿವೃತ್ತ ಎಚ್‌ಎಎಲ್ ಅಧಿಕಾರಿ) ಕಳೆದ ವರ್ಷ ಮನೆ ನಿರ್ಮಿಸಲು ಮುಂದಾದರು.

ಕಟ್ಟಡ ಸಾಮಗ್ರಿ ರವಾನಿಸಲು ಸಂಗಮದಿಂದ ಗಾಳಿಬೋರೆ ಕಡೆ ಸಾಗುವ ಆರಡಿ ಅಗಲ ಹಾಗೂ ಒಂದು ಮೈಲಿ ಉದ್ದದ ರಸ್ತೆಯನ್ನೇ ಶೆಲ್ಲಿ ಅವಲಂಬಿಸಿದ್ದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು, ಈ ರಸ್ತೆ ಕೇವಲ ಬಂಡಿ ದಾರಿ, ಇಲ್ಲಿ ಭಾರಿ ವಾಹನಗಳಿಗೆ ಪ್ರವೇಶವಿಲ್ಲ ಎಂಬ ತಕರಾರು ತೆಗೆದು ಸಾಮಗ್ರಿ ಸಾಗಿಸಲು ತಡೆ ಒಡ್ಡಿದರು.

      
   
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News