ಬೆಂಕಿ ಹಚ್ಚಿಕೊಂಡು ಸಾವು
Update: 2017-07-29 18:49 IST
ಬೆಂಗಳೂರು, ಜು.29: ಕ್ಯಾಂಡೆಲ್ ಹಚ್ಚಲು ಹೋಗಿ ತಾನೇ ಬೆಂಕಿಗೆ ಆಹುತಿಯಾಗಿರುವ ಘಟನೆ ಜೆಸಿ ನಗರದ ಚಿನ್ನಪ್ಪ ಗಾರ್ಡನ್‌ನಲ್ಲಿ ನೆನ್ನೆ ತಡರಾತ್ರಿ ನಡೆದಿದೆ.
ಜೆಸಿ ನಗರದ ಚಿನ್ನಪ್ಪಗಾರ್ಡನ್ ನಿವಾಸಿ ಕರುಣಾಕರನ್(38) ಬೆಂಕಿಗೆ ಆಹುತಿಯಾಗಿರುವ ನತದೃಷ್ಟ ವ್ಯಕ್ತಿ. ಇವರು ಹಲವು ದಿನಗಳಿಂದ ಅನಾರೋಗ್ಯದಿಂದ ಪೀಡಿತರಾಗಿದ್ದು, ಸಲೀಸಾಗಿ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರಾತ್ರಿ ಕರೆಂಟ್ ಹೋಗಿದ್ದ ವೇಳೆ ಕ್ಯಾಂಡಲ್ ಹಚ್ಚಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ.
ಈ ಸಂಬಂಧ ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.