‘ಅಚ್ಛೇ ದಿನ್’ನಲ್ಲಿ ಹೆಚ್ಚಳವಾದ ಅಮಿತ್ ಶಾ ಆಸ್ತಿಯ ಪ್ರಮಾಣ ಎಷ್ಟು ಗೊತ್ತೇ?

Update: 2017-07-30 07:24 GMT

ಹೊಸದಿಲ್ಲಿ, ಜು.30: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಆದಾಯವು ಶೇ.300ರಷ್ಟು ಹೆಚ್ಚಾಗಿರುವುದು ರಾಜ್ಯಸಭೆ ಚುನಾವಣೆಗೆ ಸಲ್ಲಿಸಿರುವ ಅಫಿದಾವಿತ್ ನಿಂದ ತಿಳಿದುಬಂದಿದೆ.

2012ರಲ್ಲಿ 1.90 ಕೋಟಿ ಮೌಲ್ಯದಷ್ಟಿದ್ದ ಚರಾಸ್ಥಿಯು 2017ರಲ್ಲಿ 19 ಕೋಟಿಯಷ್ಟಾಗಿದೆ. ಶಾ ಅವರ (ಪತ್ನಿಯದ್ದೂ ಸೇರಿ) ಸ್ಥಿರ ಹಾಗೂ ಚರಾಸ್ಥಿಯು 2012ರ ವೇಳೆಗೆ ಶೇ.300ರಷ್ಟು ಹೆಚ್ಚಳವಾಗಿದೆ. 2012ರಲ್ಲಿ 8.54 ಕೋಟಿಯಷ್ಟಿದ್ದ ಆಸ್ತಿ 5  ವರ್ಷಗಳಲ್ಲಿ 34.31 ಕೋಟಿಗೆ ತಲುಪಿದೆ.

2014ರಿಂದ 2017ರ ವೇಳೆಗೆ ಸ್ಮೃತಿ ಇರಾನಿಯವರ ಸ್ಥಿರ ಹಾಗೂ ಚರಾಸ್ಥಿ ಮೌಲ್ಯದಲ್ಲಿ 80 ಶೇ.ದಷ್ಟು ಹೆಚ್ಚಳವಾಗಿದ್ದು, 2014ರಲ್ಲಿ 4.91 ಕೋಟಿಯಷ್ಟು ಇದ್ದ ಆದಾಯ 8.88 ಕೋಟಿಯಷ್ಟು ಹೆಚ್ಚಾಗಿದೆ. 2014ರಲ್ಲಿ ಲೋಕಸಭಾ ಚುನಾವಣೆ ಸಂದರ್ಭ ಅಫಿದಾವಿತ್ ಸಲ್ಲಿಸಿದ್ದ ಸ್ಮೃತಿ ಇರಾನಿ 1994ರಲ್ಲಿ ದೆಹಲಿ ವಿವಿಯಲ್ಲಿ ಬಿ.ಕಾಂ ಪದವಿ ಗಳಿಸಿರುವುದಾಗಿ ನಮೂದಿಸಿದ್ದರು. ಆದರೆ ರಾಜ್ಯಸಭಾ ಚುನಾವಣೆಗೆ ಅಫಿದಾವಿತ್ ಸಲ್ಲಿಸುವ ವೇಳೆ ತನ್ನ ಪದವಿ ಸಂಪೂರ್ಣಗೊಂಡಿಲ್ಲ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News