ಕೇಬಲ್ ವೈರ್ ಕಳವು ಪ್ರಕರಣ: ನಾಲ್ವರ ಬಂಧನ
Update: 2017-07-30 17:52 IST
ಬೆಂಗಳೂರು, ಜು.30: ನಕಲಿ ಕೀ ಬಳಸಿ ಕೇಬಲ್ ವೈರ್ ಕಳವು ಮಾಡುತ್ತಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿ, 18.62ಲಕ್ಷ ರೂ.ವೌಲ್ಯದ ಕೇಬಲ್ ವೈರ್‌ಗಳನ್ನು ಇಲ್ಲಿನ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಶ್ರೀರಾಂಪುರ ನಿವಾಸಿ ರತನ್‌ಲಾಲ್, ಪೇಮಾರಾಮ್, ಕುರುಬರಹಳ್ಳಿಯ ರಮೇಶ್, ಬಾಬುಲಾಲ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಮಾರ್ಕೆಟ್‌ನಲ್ಲಿರುವ ನಾರಾಯಣ್ ಎಂಬುವರ ಎಲೆಕ್ಟ್ರಿಕಲ್ಸ್ ಅಂಗಡಿಯ ರೋಲಿಂಗ್ ಶೆಟರ್ ಬೀಗವನ್ನು ನಕಲಿ ಕೀಯಿಂದ ತೆಗೆದು ಒಳ ನುಗ್ಗಿ ಅಂಗಡಿಯಲ್ಲಿದ್ದ 18.62ಲಕ್ಷ ರೂ.ಬೆಲೆಯ ಕೇಬಲ್ ವೈರ್‌ಗಳಿದ್ದ 98 ಬಾಕ್ಸ್‌ಗಳನ್ನು ಜು.16ರಂದು ಕಳವು ಮಾಡಲಾಗಿತ್ತು.
ಈ ಸಂಬಂಧ ಅಂಗಡಿಯ ಮಾಲಕ ನಾರಾಯಣ್ ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.