×
Ad

ಕೊಲೆಗೆ ಸಂಚು ಆರೋಪ: ಸಿನೆಮಾ ನಿರ್ದೇಶಕ ಸಿಸಿಬಿ ಬಲೆಗೆ

Update: 2017-07-30 19:28 IST

ಬೆಂಗಳೂರು, ಜು.30: ಕೊಲೆ ಯತ್ನ, ಕೊಲೆಗೆ ಸಂಚು ಆರೋಪದ ಮೇಲೆ ‘ಸ್ಟೈಲ್’ ಸಿನೆಮಾ ನಿರ್ದೇಶಕ ಹರೀಶ್ ಎಂಬಾತ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸತೀಶ್, ಶೇಖರ್ ಹಾಗೂ ಸುರೇಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಪ್ರಕರಣ ಸಂಬಂಧ ಮೊತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಮುಂದಾಗಿದ್ದಾರೆ.

ನಿರ್ದೇಶಕ ಹರೀಶ್ ಸೇರಿ ನಾಲ್ವರ ತಂಡ ಅಶೋಕ್ ಎಂಬುವರ ಮೇಲೆ ದಾಳಿ ನಡೆಸಿದ್ದರೆಂದು ಆರೋಪಿಸಿ ಇಲ್ಲಿನ ಕೋರಮಂಗಳ ಪೊಲೀಸ್ ಠಾಣೆ ದೂರು ನೀಡಲಾಗಿತ್ತು.ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.
ಅಶೋಕ್ ಎಂಬುವರ ಬಳಿ ಆರೋಪಿ ನಿರ್ದೇಶಕ ಹರೀಶ್ ಸಿನೆಮಾ ನಿರ್ಮಾಣಕ್ಕಾಗಿ 3.5 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ವಾಪಸ್ಸು ನೀಡುವಂತೆ ಕೇಳಿದ ಅಶೋಕ್ ಅವರನ್ನು ಅಡ್ಡಗಟ್ಟಿ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News