×
Ad

ಕನಿಷ್ಟ ವೇತನ 18 ಸಾವಿರ ರೂ.ನಿಗದಿಗೆ ಆಗ್ರಹಿಸಿ ಸಿಐಟಿಯು ರ್ಯಾಲಿ

Update: 2017-07-30 19:56 IST

ಬೆಂಗಳೂರು, ಜು.30: ಕರ್ನಾಟಕ ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಹೊಂದಬೇಕಾದರೇ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ.ವೇತನ ನೀಡಬೇಕು. ಹಾಗೂ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಮತ್ತು ಸ್ಮಾರ್ಟ್‌ಕಾರ್ಡ್ ಯೋಜನೆ ಜಾರಿ ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ನಗರದ ಬನ್ನಪ್ಪ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಅವರು, ದುಡಿಯುವ ಕೈಗಳಿಗೆ ಉದ್ಯೋಗ ಲಭಿಸುತ್ತಿಲ್ಲ. ಉದ್ಯೋಗ ಲಭಿಸಿದರೂ ಸರಿಯಾದ ವೇತನವನ್ನು ನೀಡುತ್ತಿಲ್ಲ. ಇದರಿಂದ, ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸೀಲುಕುತ್ತಿದ್ದಾರೆ. ಹೀಗಾಗಿ, ವೇತನದ ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಸಮಗ್ರ ಕರ್ನಾಟಕವನ್ನು ರೂಪಿಸಲು ಕಾರ್ಮಿಕರಿಗೆ ಕನಿಷ್ಠ 18 ಸಾವಿರ ರೂ.ವೇತನ ಸೇರಿ ಇನ್ನಿತರ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರಕಾರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷ ವಾಕ್ಯವನ್ನು ಹೇಳುತ್ತದೆ ಆದರೆ, ಕಾರ್ಮಿಕರ ವಿರುದ್ಧವಾದ ಕಾನೂನುಗಳನ್ನು ಜಾರಿಗೆ ತಂದಿದೆ. ಹಾಗೂ ಅದಾನಿ, ಅಂಬಾನಿಗಳಿಗೆ ಬೆಂಬಲ ನೀಡಿ ಕಾರ್ಮಿಕರನ್ನು ತುಳಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
       
ದೇಶದ ಸಂಪತ್ತು ಬೆರಳಣಿಕೆಯ ಜನರ ಕೈಯಲ್ಲಿ ಮಾತ್ರ ಇದೆ. ಇದರಿಂದ, ಪ್ರತ್ಯೇಕ ರಾಜ್ಯದ ಕೂಗು, ಪ್ರತಿಭಟನೆಗಳು ಹಾಗೂ ಗಲಭೆಗಳು ನಡೆಯುತ್ತಿವೆ ಎಂದು ಎಂದು ಆಪಾದಿಸಿದರು.     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News