×
Ad

ಮನೆಗೆ ನುಗ್ಗಿ ಚಿನ್ನಾಭರಣ ಕಳವು

Update: 2017-08-01 18:09 IST

ಬೆಂಗಳೂರು, ಆ.1: ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದ ಚಿನ್ನಾಭರಣ ಅಂಗಡಿಯ ಮಾಲಕರೊಬ್ಬರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 1 ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಹನುಮಂತನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಶ್ರೀನಗರದ 16ನೆ ಮುಖ್ಯರಸ್ತೆಯಲ್ಲಿರುವ ಚಿನ್ನಾಭರಣ ವ್ಯಾಪಾರಿ ಪ್ರಶಾಂತ್ ಎಂಬುವರು ಸೋಮವಾರ ರಾತ್ರಿ 7ರ ವೇಳೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಹೊರಗೆ ಹೋಗಿ 10 ಗಂಟೆಗೆ ವಾಪಸ್ಸಾಗಿ ಬಂದು ನೋಡಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಲ ಮಹಡಿಯ ಗ್ರಿಲ್ಗೇಟ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೀರುವನ್ನು ಹೊಡೆದಿರುವ ದುಷ್ಕರ್ಮಿಗಳು ಅದರಲ್ಲಿದ್ದ 1 ಕೆಜಿಗೂ ಹೆಚ್ಚಿನ ತೂಕದ ಆಭರಣಗಳನ್ನು ದೋಚಿ ಬೆಳ್ಳಿ ವಸ್ತುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಪ್ರಶಾಂತ್ ಅವರು ಸಂಬಂಧಿಕರ ಮದುವೆಗಾಗಿ ಆಭರಣಗಳನ್ನು ತಂದಿಟ್ಟಿದ್ದರು ಎಂದು ತಿಳಿದುಬಂದಿದೆ. ಮೊದಲ ಮಹಡಿಯ ಗ್ರಿಲ್ಗೇಟ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೀರುವನ್ನು ಹೊಡೆದಿರುವ ದುಷ್ಕರ್ಮಿಗಳು ಅದರಲ್ಲಿದ್ದ 1 ಕೆಜಿಗೂ ಹೆಚ್ಚಿನ ತೂಕದ ಆರಣಗಳನ್ನುದೋಚಿಬೆಳ್ಳಿವಸ್ತುಗಳನ್ನುಬಿಟ್ಟುಪರಾರಿಯಾಗಿದ್ದಾರೆ.

ಪ್ರಶಾಂತ್‌ ಅವರು ಸಂಬಂಧಿಕರ ಮದುವೆಗಾಗಿ ಆಭರಣಗಳನ್ನು ತಂದಿಟ್ಟಿದ್ದರು ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News