×
Ad

ಚಿಕ್ಕಮಗಳೂರು: 15 ದಿನಗಳ ಬಿಎಸ್‌ಎನ್‌ಎಲ್ ಉತ್ಸವಕ್ಕೆ ಚಾಲನೆ

Update: 2017-08-01 18:14 IST

ಚಿಕ್ಕಮಗಳೂರು, ಆ.1: ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯ ನಡುವೆಯೂ ಭಾರತ್ ಸಂಚಾರ್ ನಿಗಮವನ್ನು ಉಳಿಸಿ ಬೆಳೆಸುವ ಮಹತ್ತರ ಹೊಣೆಗಾರಿಕೆ ಸಂಸ್ಥೆಯ ಅಧಿಕಾರಿ ಮತ್ತು ಸಿಬ್ಬಂಧಿಗಳ ಮೇಲಿದೆ ಎಂದು ನಿಗಮದ ಟೆಲಿಪೋನ್ ಸಲಹಾ ಸಮಿತಿಯ ಸದಸ್ಯ ಸಿ.ಆರ್.ಪ್ರೇಮ್‌ಕುಮಾರ್ ಹೇಳಿದರು.

ಅವರು ಮಂಗಳವಾರ ನಗರದ ಭಾರತ್ ಸಂಚಾರ್ ನಿಗಮದ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ 15 ದಿನಗಳ ಕಾಲದ ಬಿಎಸ್‌ಎನ್‌ಎಲ್ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತ್ ಸಂಚಾರ್ ನಿಗಮ ಇಂದು ಅನೇಕ ಖಾಸಗೀ ಕಂಪನಿಗಳ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಅನೇಕ ಕಂಪನಿಗಳು ಗ್ರಾಹಕರಿಗೆ ಇನ್ನಿಲ್ಲದ ಆಮಿಷಗಳನ್ನು ಹಲವು ರಿಯಾಯಿತಿಗಳನ್ನು ಪ್ರಕಟಿಸುತ್ತಿವೆ. ಇದರ ನಡುವೆ ಬಿಎಸ್‌ಎನ್‌ಎಲ್ ನಿಂದ ಗ್ರಾಹಕರು ಹೆಚ್ಚಿನ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ ಎಂದರು.

ಪೈಪೋಟಿಯ ನಡುವೆ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಉಳಿಸಿ ಬೆಳೆಸಬೇಕಾದರೆ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂಧಿ ಗ್ರಾಹಕರ ಸ್ನೇಹಿಯಾಗಿ ವರ್ತಿಸಬೇಕು, ನಗುಮುಖದ ಸೇವೆಯನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.

ನಿಗಮದ ಉಪ ಮಹಾಪ್ರಬಂಧಕ ಕೆ.ಎಲ್.ಶಿವಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, 15 ದಿನಗಳ ಕಾಲ ಬಿಎಸ್‌ಎನ್‌ಎಲ್ ಉತ್ಸವವನ್ನು ರಾಜ್ಯಾದ್ಯಂತ ಇಂದಿನಿಂದ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಗ್ರಾಹಕರಿಗೆ ಉಚಿತ ಸಿಮ್ ಸೇರಿದಂತೆ ಅನೇಕ ಆಕರ್ಷಕ ಯೋಜನೆಗಳನ್ನು ನೀಡಲಾಗುವುದು. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಮೊಬೈಲ್‌ಗೆ ಆಧಾರ್ ಲಿಂಕ್ ಮಾಡಲಾಗುತ್ತಿದ್ದು, ಫೆಬ್ರವರಿ ಒಳಗೆ ಗ್ರಾಹಕರು ಲಿಂಕ್ ಮಾಡಿಸಿಕೊಳ್ಳುವಂತೆ ಮನವಿ ಮಾಡಿದರು.
 

ಉತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು, ಹೊಸ ಯೋಜನೆಗಳ ಕುರಿತು ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಮಾಡಲಾಯಿತು. ನಿಗಮದ ಸಹಾಯಕ ಮಹಾಪ್ರಬಂಧಕ ಕೆ.ಭಾಸ್ಕರ್, ಉಪ ಮಂಡಲ ಅಭಿಯಂತರರಾದ ಎನ್.ಪಿ.ಭಾಸ್ಕರ್ ಮತ್ತು ಅರ್.ಜ್ಯೋತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News