×
Ad

ನಾಲ್ಕು ಕೋಟಿ ಠೇವಣಿ ಇಡಿ ಎಂದ ಹೈಕೋರ್ಟ್

Update: 2017-08-01 21:10 IST

ಬೆಂಗಳೂರು, ಜು.31: ಕೆನರಾ ಮಿನರಲ್ಸ್ ಲಿಮಿಟೆಡ್‌ನ ಆಸ್ತಿಯನ್ನು ಹರಾಜಿಗೆ ಹಾಕಬಾರದೆಂದು ಶಾಸಕ ಅನಿಲ್ ಲಾಡ್ ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನಾಲ್ಕು ಕೋಟಿ ರೂ. ಠೇವಣಿ ಇರಿಸಿದರೆ ಆಸ್ತಿ ಹರಾಜು ಪ್ರಕ್ರಿಯೆಗೆ ತಡೆ ನೀಡುವುದಾಗಿ ಹೈಕೋರ್ಟ್ ತಿಳಿಸಿದೆ.

 ಕೆನರಾ ಮಿನರಲ್ಸ್ ಲಿಮಿಟೆಡ್‌ನ ಆಸ್ತಿಯನ್ನು ಎಸ್‌ಬಿಐನವರು ಹರಾಜು ಹಾಕುವ ಆದೇಶಕ್ಕೆ ತಡೆ ನೀಡಬೇಕೆಂದು ಶಾಸಕ ಅನಿಲ್ ಲಾಡ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ನ್ಯಾಯಾಲಯಕ್ಕೆ ನಾಲ್ಕು ಕೋಟಿ ರೂ.ಠೇವಣಿ ಇರಿಸಿದರೆ ಆಸ್ತಿ ಹರಾಜಿಗೆ ತಡೆ ನೀಡುವುದಾಗಿ ತಿಳಿಸಿದೆ.

ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಶಾಸಕ ಅನಿಲ್ ಲಾಡ್ ಪರ ವಕೀಲರು ಅನಿಲ್ ಲಾಡ್ ಅವರಿಂದ ಮಾಹಿತಿ ಪಡೆದುಕೊಂಡು ತಿಳಿಸುವುದಾಗಿ ಪೀಠಕ್ಕೆ ತಿಳಿಸಿದರು.
         

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News