×
Ad

ಚಾಮರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣದಿಂದ ಹಿಂದೆ ಸರಿದ ಪಾಲಿಕೆ

Update: 2017-08-01 21:39 IST

ಬೆಂಗಳೂರು,ಜು.1: ಸಾರ್ವಜನಿಕರ ಪ್ರತಿಭಟನೆಗೆ ಮಣಿದಿರುವ ಬಿಬಿಎಂಪಿ ಚಾಮರಾಜಪೇಟೆಯ ವಾರ್ಡ್ ನಂ.140ರಲ್ಲಿ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕೈಬಿಟ್ಟಿದೆ.

ಐತಿಹಾಸಿಕ ರಾಮೇಶ್ವರ ದೇವಸ್ಥಾನದ ಕಾಂಪೌಂಡ್ ಅನ್ನು ಕೆಡವಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿತ್ತು. ದೇವಸ್ಥಾನ ಆವರಣದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳೀಯ ನಿವಾಸಿಗಳಿಂದ ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಹಿಂದೆ ಸರಿದಿದೆ.
  
ಮುಜರಾಯಿ ಇಲಾಖೆಯ ಅನುಮತಿಯ ಮೇರೆಗೆ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದ ಹಿಂಭಾಗದ ಖಾಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಪಾಲಿಕೆ ಕೈ ಹಾಕಿತ್ತು. ಅದರಂತೆ ಜು.31ರಂದು ದೇವಾಲಯದ ಆವರಣದ ಹಿಂಭಾಗದ ಗೋಡೆಯನ್ನು ಕೆಡವಲಾಗಿತ್ತು. ಮುಜರಾಯಿ ಇಲಾಖೆಯ ಅನುಮತಿಯ ಮೇರೆಗೆ ಚಾಮರಾಜಪೇಟೆಯ ರಾಮೇಶ್ವರ ದೇವಸ್ಥಾನದ ಹಿಂಭಾಗದ ಖಾಲಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಪಾಲಿಕೆ ಕೈಹಾಕಿತ್ತು. ಅದರಂತೆಜು.31ರಂದು ದೇವಾಲಯದ ಆವರಣದ ಹಿಂಭಾಗದ ಗೋಡೆಯನ್ನು ಕೆಡವಲಾಗಿತ್ತು. ಸಾರ್ವಜನಿಕರ ಒತ್ತಡಕ್ಕೆ ಮಣಿದಿರುವ ಪಾಲಿಕೆ ಕ್ಯಾಂಟೀನ್ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿ, ಕೆಡವಿರುವ ಕಾಂಪೌಂಡ್ ಅನ್ನು ಪುನರ್ ನಿರ್ಮಾಣಕ್ಕೆ ಮುಂದಾಗಿದೆ.

ಮುಜರಾಯಿ ಇಲಾಖೆ ಅನುಮತಿ ನೀಡಿದ್ದರಿಂದಲೇ ದೇವಾಲಯದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. ಆದರೆ ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿ ಬಂದಿರುವುದರಿಂದ ಕ್ಯಾಂಟೀನ್ ನಿರ್ಮಾಣ ಕೈಬೀಡಲಾಗಿದೆ. ಎರಡು ದಿನಗಳಲ್ಲಿ ಬಿಬಿಎಂಪಿ ಖರ್ಚಿನಲ್ಲಿ ಕಾಂಪೌಂಡ್ ನಿರ್ಮಿಸಲು ಆದೇಶಿಸಲಾಗಿದೆ. ವಾರ್ಡ್ ನಂ140ರಲ್ಲ್ಲಿ ಪಾಲಿಕೆಯ ಸ್ವತ್ತಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಮಂಜುನಾಥ್ ಪ್ರಸಾದ್, ಪಾಲಿಕೆ ಆಯುಕ್ತ 
    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News