×
Ad

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಪ್ರಕಟ

Update: 2017-08-01 22:14 IST

ಬೆಂಗಳೂರು, ಆ.1: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯು 2014ನೆ ಸಾಲಿನಿಂದ 2016ವರೆಗಿನ ಪುಸ್ತಕ ಬಹುಮಾನಕ್ಕೆ ಆಯ್ಕೆ ಆದ ಲೇಖಕರ ಹೆಸರನ್ನು ಪ್ರಕಟಿಸಿದೆ.

ಮಂಗಳವಾರ ನಗರದ ಕನ್ನಡಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ, 2014ನೆ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರಾಗಿ ಯಕ್ಷಗಾನ ಪ್ರಸಂಗ ಪಂಚಕ ಪುಸ್ತಕದ ಲೇಖಕ ಸೇರಾಜೆ ಸೀತಾರಾಮ ಭಟ್ಟ ಹಾಗೂ ಯಕ್ಷಗಾನ ವಾಚಿಕ ಸಮಾರಾಧನೆ ಪುಸ್ತಕದ ರವಿಶಂಕರ್ ವಳಕ್ಕುಂಜ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

2015ನೆ ಸಾಲಿನ ಬಹುಮಾನಕ್ಕೆ ಡಾ.ನಾಗವೇಣಿ ಮಂಬಿ(ಬಲಿಪ ಗಾನಯಾನ), 2016ನೆ ಸಾಲಿನಲ್ಲಿ ಪುಸ್ತಕ ಬಹುಮಾನಕ್ಕೆ ಶೆಡ್ಡಿಗುಮ್ಮೆ ವಾಸುದೇವಭಟ್(ಯಕ್ಷಕುಸುಮ), ಡಾ.ಪಾದೇಕಲ್ಲು ವಿಷ್ಣುಭಟ್ಟ(ಯಕ್ಷಗಾನಾಧ್ಯಯನ), ಬೊಟ್ಟಿಕೆರೆ ಪುರುಷೋತ್ತಮ(ಅಂಬುರಹ-ಲವ) ಆಯ್ಕೆಯಾಗಿದ್ದಾರೆ.
2014ನೆ ಸಾಲಿನ ಪುಸ್ತಕ ಪ್ರಶಸ್ತಿಗಳಿಗೆ ತಲಾ 5 ಸಾವಿರ, 2015-16ನೆ ಸಾಲಿನ ಪ್ರಶಸ್ತಿಗಳು ತಲಾ 25 ಸಾವಿರ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಫಲಕ ಪ್ರಮಾಣಪತ್ರಗಳು ಒಳಗೊಂಡಿವೆ.

ಆ.5ಕ್ಕೆ ಬಾಗಲಕೋಟೆಯಲ್ಲಿ ಬಹುಮಾನ ಪ್ರದಾನ: ಆ.5ರಂದು ಬಾಗಲಕೋಟೆಯ ನವನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಂಜೆ 5 ಗಂಟೆಗೆ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ, ಬಾಗಲಕೋಟ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ವೀಣಾ, ಮಾಜಿ ಸಚಿವ ಎಚ್.ವೈ.ಮೇಟಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
 
ಸಾಕ್ಷಚಿತ್ರ ಪ್ರದರ್ಶನ: ಬಯಲಾಟ, ತೊಗಲು ಗೊಂಬೆಯಾಟ, ಯಕ್ಷಗಾನದಲ್ಲಿ ಕೀರ್ತಿ ಗಳಿಸಿರುವ ಚನ್ನಪ್ಪರಾಮಪ್ಪ ಹೆಗಡಿ, ಸಿದ್ದಪ್ಪ ಅಮ್ಮಣ್ಣ ತಳೆವಾಡ, ಮಾರೆಪ್ಪ ಮೆಟ್ರಿ, ಫಕೀರಪ್ಪ ಬಸವಣ್ಣಿಪ್ಪ ಗೌರವಕ್ಕನವರ್, ಪುಟ್ಟಸ್ವಾಮಯ್ಯ, ಎಂ.ಆರ್.ರಂಗನಾಥರಾವ್, ತಿಮ್ಮಪ್ಪಾಚಾರ್ಯ ಕುರಿತು ಅಕಾಡೆಮಿ ರಚಿಸಿರುವ ಸಾಕ್ಷಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು ಎಂದರು.

ಸಾಕ್ಷಚಿತ್ರ ಪ್ರದರ್ಶನ: ಬಯಲಾಟ, ತೊಗಲು ಗೊಂಬೆಯಾಟ, ಯಕ್ಷಗಾನದಲ್ಲಿ ಕೀರ್ತಿ ಗಳಿಸಿರುವ ಚನ್ನಪ್ಪರಾಮಪ್ಪ ಹೆಗಡಿ, ಸಿದ್ದಪ್ಪ ಅಮ್ಮಣ್ಣ ತಳೆವಾಡ, ಮಾರೆಪ್ಪ ಮೆಟ್ರಿ, ಫಕೀರಪ್ಪ ಬಸವಣ್ಣಿಪ್ಪ ಗೌರವಕ್ಕನವರ್, ಪುಟ್ಟಸ್ವಾಮಯ್ಯ, ಎಂ.ಆರ್.ರಂಗನಾಥರಾವ್, ತಿಮ್ಮಪ್ಪಾಚಾರ್ಯ ಕುರಿತು ಅಕಾಡೆಮಿ ರಚಿಸಿರುವ ಸಾಕ್ಷಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಹೆಚ್.ಶಿವರುದ್ರಪ್ಪ, ಸದಸ್ಯ ಡಾ.ಬಿ.ಎಂ.ಗುರುನಾಥ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News