ಸೌದಿ ಅರೇಬಿಯ: ಅಲ್‍ಬಾಹದಲ್ಲಿ ಕಾನೂನು ಉಲ್ಲಂಘಿಸಿದ 1,800 ವಿದೇಶಿ ಕಾರ್ಮಿಕರ ಬಂಧನ

Update: 2017-08-02 14:01 GMT

ರಿಯಾದ್,ಆ.2: ಸಾರ್ವತ್ರಿಕ ಕ್ಷಮೆ ಸಮಯಾವಧಿ ಮುಗಿದ ನಂತರವೂ ಉಳಿದುಕೊಂಡಿದ್ದ 1,800 ವಿದೇಶಿ ಕಾರ್ಮಿಕರನ್ನು ಬಂಧಿಸಲಾಗಿದೆ. ಉದ್ಯೋಗ, ವಾಸ್ತವ್ಯ ಕಾನೂನುಗಳನ್ನು ಉಲ್ಲಂಘಿಸಿದವರು, ಗಡಿದಾಟಿ ಬಂದ ನುಸುಳುಕೋರರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ ಎಂದು ಅಲ್‍ಬಾಹ ರೀಜನಲ್ ಪೋಲಿಸ್ ವಕ್ತಾರ ಕರ್ನಲ್ ಸಾದ್ ತ್ರಾದ್ ತಿಳಿಸಿದ್ದಾರೆ.

ವಾಸ್ತವ್ಯ, ಕಾರ್ಮಿಕ ಕಾನೂನು ಉಲ್ಲಂಘನೆ ನಡೆಸಿದ 597 ಮಂದಿ, ನಾಗರಿಕತೆಯನ್ನು ಸ್ಪಷ್ಟಪಡಿಸಲಾಗದ 125 ಮಂದಿ, ಇಖಾಮದ ಕಾಲಾವಧಿ ಮೀರಿದ 667 ಮಂದಿ, ಪ್ರಾಯೋಜಕರ ಬಳಿಯಿಂದ ತಪ್ಪಿಸಿಕೊಂಡು ಹುರುಬ್ ಪ್ರಕರಣಕ್ಕೆ ಸೇರಿದ 66ಮಂದಿ , ಪ್ರಾಯೋಜಕರ ಬದಲಾಯಿಸಿ ಕೆಲಸ ಮಾಡಿದ ಆರು ಮಂದಿ, ಸ್ವಂತ ಸಂಸ್ಥೆಗಳನ್ನುಇಟ್ಟುಕೊಂಡ 45 ಮಂದಿ, ಪ್ರಾಯೋಜಕರ  ಅಡಿಯಲ್ಲಿ ಕೆಲಸಕ್ಕೆ ಹೋಗದ 37 ಮಂದಿ, ಇತರ ಕಾನೂನು ಉಲ್ಲಂಘಿಸಿದ 31 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾರ್ವತ್ರಿಕ ಕ್ಷಮಾದಾನ ನಂತರವೂ ಕಾನೂನು ಉಲ್ಲಂಘಿಸಿದವರನ್ನು ಹುಡುಕುವ ಪ್ರಕ್ರಿಯೆ ಮುಂದುವರಿಯುತ್ತಿದೆ. ಹೀಗೆ ಬಂಧನಕ್ಕೊಳಗಾಗುವವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಕರ್ನಲ್ ಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News