ರಾಜ್ಯದ ಎಲ್ಲ ಗುತ್ತಿಗೆ ಪೌರಕಾರ್ಮಿಕರ ಖಾಯಮಾತಿಗೆ ಒತ್ತಾಯ

Update: 2017-08-02 15:01 GMT

ಬೆಂಗಳೂರು, ಆ.2: ರಾಜ್ಯದಲ್ಲಿರುವ ಕಾರ್ಯನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಪೌರ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿ ಎಐಸಿಸಿಟಿಯು ವತಿಯಿಂದ ನಗರದ ಕಾರ್ಮಿಕ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.

ರಾಜ್ಯ ಸರಕಾರ ಕೇವಲ 11ಸಾವಿರ ಗುತ್ತಿಗೆ ಕಾರ್ಮಿಕರನ್ನು ಮಾತ್ರ ಖಾಯಂಗೊಳಿಸಿದೆ. ಉಳಿದ 25ಸಾವಿರ ಗುತ್ತಿಗೆ ಕಾರ್ಮಿಕರ ಸೇವಾ ಭದ್ರತೆಗೆ ಯಾವುದೇ ಖಾತ್ರಿಯಿಲ್ಲ. ಈ ರೀತಿಯಲ್ಲಿ ಪೌರಕಾರ್ಮಿಕ ಸಮುದಾಯವನ್ನು ತಮ್ಮ ಇಷ್ಟ ಬಂದಂತೆ ನಡೆಸಿಕೊಳ್ಳುವುದು ಎಷ್ಟು ಸರಿಯೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಐಸಿಸಿಟಿಯು ಸಂಘಟನೆಯ ಮುಖಂಡ ಕ್ಲಿಫ್ಟನ್ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಪೌರಕಾರ್ಮಿಕರು ಒಂದೇ ರೀತಿಯ ಕೆಲಸವಾಗಿದೆ. ಆದರೆ, ಸರಕಾರ ಮಾತ್ರ ಗುತ್ತಿಗೆ ಹಾಗೂ ಖಾಯಂ ನೌಕರರೆಂದು ವಿಂಗಡಿಸಲು ಹೊರಟಿದೆ. ಇದು ಸರಕಾರದ ಜನಪರ ನಿಲುವಲ್ಲ ಎಂದು ಖಂಡಿಸಿದರು.

ಸರಕಾರಿ ವಲಯದಲ್ಲಿ ಪೌರಕಾರ್ಮಿಕರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ಕಾಣಲಾಗುತ್ತದೆ. ಪೌರಕಾರ್ಮಿಕರು ಕೇವಲ ಯಂತ್ರದಂತೆ ಬಳಸಿಕೊಳ್ಳಲಾಗುತ್ತಿದೆ. ಹಬ್ಬ ಹರಿದಿನ, ವಾರದ ರಜೆ ಸೇರಿದಂತೆ ಯಾವೊಂದು ರಜೆ ಕೊಡದೆ ಶಿಕ್ಷಿಸಲಾಗುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿಯನ್ನು ಈ ಕೂಡಲೆ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

ಪೌರಕಾರ್ಮಿಕರು ಕೆಲಸ ಮಾಡುವ ವೇಳೆ ಕನಿಷ್ಟ ಸೌಲಭ್ಯವನ್ನು ಒದಗಿಸಬೇಕು. ಪೌರಕಾರ್ಮಿಕರು ಬಳಸುವ ಪರಿಕರಗಳನ್ನು ನಿಗಧಿತ ಸಮಯಕ್ಕೆ ಬದಲಾಯಿಸಲು ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಒದಗಿಸಬೇಕೆಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News