ಡಿಕೆಶಿ ಮನೆಗೆ ಐಟಿ ದಾಳಿ: ನಗದು-ಚಿನ್ನಾಭರಣ ಪತ್ತೆಯಾಗಿಲ್ಲ; ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ
Update: 2017-08-03 19:51 IST
ಬೆಂಗಳೂರು, ಆ.3: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಸದಾಶಿವನಗರದಲ್ಲಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸ ‘ಕೆಂಕೇರಿ’ಯಲ್ಲಿ ಯಾವುದೇ ರೀತಿಯ ನಗದು, ಚಿನ್ನಾಭರಣಗಳು ಲಭ್ಯವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತ ಓ.ಎನ್.ಹರಿಪ್ರಸಾದ್‌ರಾವ್ ತಿಳಿಸಿದ್ದಾರೆ.
ಆ.2ರಂದು ಬೆಳಗ್ಗೆ 7.15 ರಿಂದ ರಾತ್ರಿ 10.45ರವರೆಗೆ ನಡೆದಿರುವ ಪರಿಶೀಲನೆ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಆಭರಣಗಳು, ನಗದು ಪತ್ತೆಯಾಗಿಲ್ಲ ಎಂದು ವಿಠ್ಠಲ್‌ರಾವ್ ನಳಿಗೆ ಹಾಗೂ ಪಾರ್ಥ ಕೆ.ಆರ್. ಎಂಬವರ ಸಮ್ಮುಖದಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಎಂ.ರುದ್ರಪ್ಪ ಪಂಚನಾಮೆ ಮಾಡಿದ್ದಾರೆ.
ಶಿವಕುಮಾರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ ಆಸ್ತಿಪಾಸ್ತಿಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.