‘ವನ್ನಾಕ್ರೈ’ ವೈರಸ್ ದಾಳಿಯನ್ನು ತಡೆದಿದ್ದ ‘ಹ್ಯಾಕಿಂಗ್ ಹೀರೋ’ನ ಬಂಧನ

Update: 2017-08-04 07:10 GMT

ಲಾಸ್ ವೇಗಾಸ್, ಆ.4: ‘ವನ್ನಾಕ್ರೈ’ ವೈರಸ್ ಸೈಬರ್ ದಾಳಿಯನ್ನು ತಡೆದು ಸೈಬರ್ ಹೀರೋ ಎನಿಸಿಕೊಂಡಿದ್ದ ಮಾರ್ಕಸ್ ಹಚಿನ್ಸ್ ನನ್ನು ಕೆನಡಾ ಹಾಗೂ ಯುರೋಪ್ ನ ಬ್ಯಾಂಕಿಂಗ್ ಸಿಸ್ಟಮ್ ಗಳನ್ನು ಹ್ಯಾಕ್ ಮಾಡಲು ಮಾಲ್ ವೇರನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿಸಲಾಗಿದೆ.

ಕ್ರೋನೋಸ್ ಬ್ಯಾಂಕಿಂಗ್ ಟ್ರೋಜಾನ್ ನ ಸೃಷ್ಟಿ ಹಾಗೂ ವಿತರಣೆಯಲ್ಲಿ ಕಂಪ್ಯೂಟರ್ ನ ದುರ್ಬಳಕೆ ಪ್ರಕರಣದಲ್ಲಿ  ಮಾರ್ಕಸ್ ರನ್ನು ಲಾಸ್ ವೇಗಾಸ್ ನಲ್ಲಿ ಬಂಧಿಸಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ‘ವನ್ನಾ ಕ್ರೈ’ ಸೈಬರ್ ದಾಳಿ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಕಂಪ್ಯೂಟರ್ ಗಳನ್ನು ಹ್ಯಾಕ್ ಮಾಡಿದ್ದ ಹ್ಯಾಕರ್ ಗಳು ಹಣದ ಬೇಡಿಕೆಯಿಟ್ಟಿದ್ದರು. ವಿಶ್ವದ 150 ದೇಶಗಳ 3,00,000 ಕಂಪ್ಯೂಟರ್ ಗಳು ಈ ಸೈಬರ್ ದಾಳಿಗೆ ತುತ್ತಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News