×
Ad

200 ಕೋಟಿ ರೂ.ಸೇವಾ ತೆರಿಗೆ ಕಟ್ಟಲು ಜಿಎಸ್‌ಟಿ ಕೌನ್ಸಿಲ್‌ನಿಂದ ಬಿಬಿಎಂಪಿಗೆ ನೋಟಿಸ್

Update: 2017-08-04 18:01 IST

ಬೆಂಗಳೂರು, ಆ.4: ಕಸವಿಲೇವಾರಿಗೆ ಸಂಬಂಧಿಸಿದಂತೆ ಸೇವಾ ತೆರಿಗೆ ಕಟ್ಟುವಂತೆ ಜಿಎಸ್‌ಟಿ ಕೌನ್ಸಿಲ್‌ನಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ.

ಕಸ ವಿಲೇವಾರಿ ಗುತ್ತಿಗೆ ಪಡೆಯುವುದಕ್ಕಾಗಿ ಬಿಬಿಎಂಪಿ ವಿಧಿಸಿದ್ದ ಕಠಿಣ ನಿಯಮದಿಂದಾಗಿ ಯಾವೊಬ್ಬ ಗುತ್ತಿಗೆದಾರರೂ ಬಿಡ್ ಸಲ್ಲಿಸಲಿಲ್ಲ. ಹೀಗಾಗಿ ಕಸ ವಿಲೇವಾರಿಯನ್ನು ಬಿಬಿಎಂಪಿ ಮೂಲಕವೇ ಮಾಡಲಾಗುತ್ತಿದೆ. ಅದಕ್ಕಾಗಿ ಬಿಬಿಎಂಪಿ ಕೆಲ ಗುತ್ತಿಗೆದಾರರನ್ನು ಸರ್ವೀಸ್ ಪ್ರೊವೈಡರ್‌ಗಳೆಂದು ನೇಮಿಸಿಕೊಂಡಿದೆ. ಇದು ಸೇವಾ ತೆರಿಗೆ ವ್ಯಾಪ್ತಿಗೆ ಬರಲಿದ್ದು, ತೆರಿಗೆ ಪಾವಿಸುವಂತೆ ನೋಟಿಸ್ ನೀಡಲಾಗಿದೆ.
ಈಗಾಗಲೇ ಕಸ ವಿಲೇವಾರಿಗೆ 800ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದೀಗ ಹೆಚ್ಚುವರಿಯಾಗಿ 200ಕೋಟಿ ರೂ.ಖರ್ಚಾಗಲಿದೆ. ಬಿಬಿಎಂಪಿ ಅಧಿಕಾರಿಗಳು ಮಾಡಿರುವ ತಪ್ಪಿನಿಂದ ಅಷ್ಟು ದೊಡ್ಡ ಪ್ರಮಾಣದ ಹಣ ಪಾವತಿಸಬೇಕಿದೆ. ಈ ಹಣವನ್ನು ಅಧಿಕಾರಿಗಳು, ಸಚಿವರು ತಮ್ಮ ಸ್ವಂತ ಹಣದಿಂದ ಪಾವತಿಸಲಿ ಎಂದು ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಗ್ರಹಿಸಿದ್ದಾರೆ.

ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸೇವಾ ತೆರಿಗೆ ಪಾವತಿಸುವ ಕುರಿತು ಜಿಎಸ್‌ಟಿ ಕೌನ್ಸಿಲ್‌ನಿಂದ ನೋಟಿಸ್ ಬಂದಿದೆ. ಅದನ್ನು ಪರಿಶೀಲನೆಗೆ ಕಾನೂನು ವಿಭಾಗಕ್ಕೆ ನೀಡಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News