ದ್ವಿತೀಯ ಟೆಸ್ಟ್: ಫಾಲೋ-ಆನ್‌ಗೆ ಸಿಲುಕಿದ ಸಿಂಹಳೀಯರು

Update: 2017-08-05 07:29 GMT

 ಕೊಲಂಬೊ,ಆ.5: ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(5-69) ನೇತೃತ್ವದ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ತಂಡ ದ್ವಿತೀಯ ಟೆಸ್ಟ್‌ನ 3ನೆ ದಿನವಾದ ಶನಿವಾರ ಮೊದಲ ಇನಿಂಗ್ಸ್‌ನಲ್ಲಿ ಕೇವಲ 183 ರನ್‌ಗೆ ಆಲೌಟಾಗುವ ಮೂಲಕ ಫಾಲೋ-ಆನ್‌ಗೆ ಸಿಲುಕಿದೆ.

ಭಾರತದ ಮೊದಲ ಇನಿಂಗ್ಸ್ 622 ರನ್‌ಗೆ ಉತ್ತರಿಸಹೊರಟ ಶ್ರೀಲಂಕಾದ ಪರ ಡಿಕ್ವೆಲ್ಲಾ(51)ಹೊರತುಪಡಿಸಿ ಬೇರೆ ಯಾವ ಬ್ಯಾಟ್ಸ್‌ಮನ್ ಹೋರಾಟವನ್ನು ನೀಡಲಿಲ್ಲ. ಡಿಕ್ವೆಲ್ಲಾ ಕೇವಲ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳ ಸಹಿತ ವೇಗದ ಅರ್ಧಶತಕ ಬಾರಿಸಿ ಗಮನ ಸೆಳೆದರು.

ಭಾರತದ ಬೃಹತ್ ಮೊತ್ತವನ್ನು ನೋಡಿಯೇ ಮೂರ್ಛೆ ಹೋದವರಂತೆ ವರ್ತಿಸಿದ ಶ್ರೀಲಂಕಾದ ಪರ ಮ್ಯಾಥ್ಯೂಸ್(26) ಕರುಣರತ್ನೆ(25), ಪೆರೇರ(25), ಕುಶಾಲ್ ಮೆಂಡಿಸ್(24)ದೊಡ್ಡ ಮೊತ್ತ ಗಳಿಸಲು ವಿಫಲರಾದರು.
ಆರ್.ಅಶ್ವಿನ್ 26ನೆ ಬಾರಿ ಟೆಸ್ಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದರು. ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದ ರವೀಂದ್ರ ಜಡೇಜ(2-84) ಹಾಗೂ ಮುಹಮ್ಮದ್ ಶಮಿ(2-13) ಅಶ್ವಿನ್‌ಗೆ ಉತ್ತಮ ಸಾಥ್ ನೀಡಿದರು.
ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗೆ ತನ್ನ ಹೋರಾಟವನ್ನು ಕೊನೆಗೊಳಿಸಿದ ಶ್ರೀಲಂಕಾ 439 ರನ್ ಹಿನ್ನಡೆ ಅನುಭವಿಸಿತು. ಭಾರತದ ನಾಯಕ ಕೊಹ್ಲಿ ಹೆಚ್ಚು ಯೋಚಿಸದೇ ಶ್ರೀಲಂಕಾವನ್ನು ಮತ್ತೆ ಬ್ಯಾಟಿಂಗ್‌ಗೆ ಇಳಿಸಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News