×
Ad

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಆಗ್ರಹಿಸಿ ಆ.22 ರಂದು ಸಮಾವೇಶ

Update: 2017-08-07 18:00 IST

ಬೆಂಗಳೂರು, ಆ.7: ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಆ.22 ರಂದು ಬೆಳಗಾವಿಯ ಲಿಂಗರಾಜ ಕಾಲೇಜ್ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿಗೆ ವೀರಶೈವ ಮಹಾಸಭಾ ಸಭೆ ನಡೆಸಿ ವೀರಶೈವ ಹಾಗೂ ಲಿಂಗಾಯತ ಒಂದೆ. ಹೀಗಾಗಿ, ವೀರಶೈವ ಲಿಂಗಾಯತ ಧರ್ಮಕ್ಕೆ ಮುಖ್ಯಮಂತ್ರಿ ಶಿಫಾರಸ್ಸು ಮಾಡಬೇಕು ಎಂದು ನಿರ್ಣಯ ಕೈಗೊಂಡಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಹೇಳಿದರು.
ವೀರಶೈವ ಮತ್ತು ಲಿಂಗಾಯತ ವಿಭಿನ್ನ ವಿಚಾರಧಾರೆಗಳಾಗಿದ್ದು, ಎರಡಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ಈ ಎರಡೂ ಒಂದುಗೂಡಲು ಸಾಧ್ಯವಿಲ್ಲ. ವೀರಶೈವವು ಶೈವ ಪರಂಪರೆಯಲ್ಲಿ ಬರುವ ಒಂದು ಪಂಥ. ಮೂಲದಿಂದಲೇ ಬೇರೆ ಧರ್ಮದ ವೆುೀಲೆ ಆಧಾರಿತವಾದದು. ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಶಿವನನ್ನು ಆರಾಧಿಸುವ ಪಂಥ. ಆದರೆ, ಲಿಂಗಾಯತ ಧರ್ಮ ಸ್ವತಂತ್ರವಾಗಿದ್ದು, ಬಸವಣ್ಣರಿಂದ ಆರಂಭವಾಗಿ ವಚನ ಸಾಹಿತ್ಯ ಆಧಾರಿತವಾದುದು. ಇದು ಹಿಂದೂ ಧರ್ಮದ ಭಾಗವಲ್ಲ ಎಂದು ಪ್ರತಿಪಾದಿಸಿದರು.

ಕ್ರೈಸ್ತ, ಮುಸ್ಲಿಂ, ಜೈನ, ಬೌದ್ಧ ಹಾಗೂ ಸಿಖ್ ಧರ್ಮಗಳಿರುವ ರೀತಿಯಲ್ಲಿಯೇ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಕೇಂದ್ರ ಸರಕಾರಕ್ಕೆ ರಾಜ್ಯ ಸರಕಾರ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

ಜನ ಜಾಗೃತಿ ರ್ಯಾಲಿ: ಸ್ವತಂತ್ರ ಧರ್ಮ ಮಾನ್ಯತೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ವಿವಿಧ ಕಡೆಗಳಲ್ಲಿ ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಆ.22 ರಂದು ಬೆಳಗಾವಿ, ಆ.26 ರಂದು ಗುಲಬರ್ಗಾದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ನೆರೆ ರಾಜ್ಯಗಳ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸೆ.3 ರಂದು ಮಹಾರಾಷ್ಟ್ರದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಇದರಲ್ಲಿ ವಿವಿಧ ಸಮಾನ ಮನಸ್ಕ ಮಠಾಧೀಶರು, ರಾಜಕಾರಣಿಗಳು ಭಾಗವಹಿಸುತ್ತಾರೆ ಎಂದರು.

ಚಿಮೂ ಅರ್ಧ ಸತ್ಯ: ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿಯು ವೀರಶೈವ ಹಿಂದೂ ಧರ್ಮದ ಭಾಗ ಎಂದು ಹೇಳಿರುವುದು ಸತ್ಯ. ಆದರೆ, ವೀರಶೈವ-ಲಿಂಗಾಯತ ಒಂದೇ ಎನ್ನುವುದು ಅಪ್ಪಟ ಸುಳ್ಳು. ಇದನ್ನು ನಾವು ವಿರೋಧಿಸುತ್ತೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಅಧ್ಯಕ್ಷ ಚಂದ್ರವೌಳಿ, ಬಸವ ದಳದ ಅಧ್ಯಕ್ಷ ಮಂಜುನಾಥ ಬಂಡಿ, ವೀರೇಶ್, ದಿಲೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News