×
Ad

ಹಣ್ಣಿನ ವ್ಯಾಪಾರಿ ಹತ್ಯೆ ಪ್ರಕರಣ: ಆರೋಪಿಗಳ ಬಂಧನ

Update: 2017-08-07 18:07 IST

ಬೆಂಗಳೂರು ಆ.7: ಹಣ್ಣಿನ ವ್ಯಾಪಾರಿ ಕೆ.ಎಂ.ರಹಮತ್ ಹತ್ಯೆ ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರಿ ನಗರದ ಝಬೀ (37), ತನ್ವೀರ್ ಪಾಶ(28), ಅಂಜನಪುರದ ನವೀನ(27) ಬಂಧಿತ ಆರೋಪಿಗಳಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರವೀಣ್ ಎಂಬಾತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನಲೆ: ಆರೋಪಿ ಝಬೀ ಆ.4ರಂದು ಹರಿನಗರದ ತನ್ನ ಅಣ್ಣನ ಗುಜರಿ ಅಂಗಡಿ ಬಳಿ ಕಾರು ನಿಲ್ಲಿಸಿದ್ದ ವೇಳೆ ಮದ್ಯದ ಅಮಲಿನಲ್ಲಿದ್ದ ರಹಮತ್ ಕಲ್ಲುಗಳಿಂದ ಕಾರಿನ ಗಾಜು, ಬಾಗಿಲನ್ನು ಹೊಡೆದು ಸಂಪೂರ್ಣ ಹಾನಿಗೊಳಿಸಿದ್ದ ಎನ್ನಲಾಗಿದೆ.

ಇದನ್ನು ತಿಳಿದ ಝಬೀ, ರಹಮತ್‌ಗೆ ಕಾರು ಸರಿಪಡಿಸುವಂತೆ ಹೇಳಿದ್ದು, ಇಬ್ಬರ ನಡುವೆ ಈ ವಿಚಾರವಾಗಿ ಜಗಳ ನಡೆದಾಗ ಹಿರಿಯರು ಸಮಾಧಾನ ಪಡಿಸಿದ್ದರು. ಬಳಿಕ ವಾರ ಕಳೆದರೂ ರಹಮತ್ ಕಾರು ಸರಿಪಡಿಸಿಲ್ಲ ಎಂದು ಬೇಸತ್ತು ಜಗಳ ಮಾಡಿದ ಝಬೀ ಸ್ನೇಹಿತರೊಂದಿಗೆ ಸೇರಿ, ರಹಮತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡ ತಲಘಟ್ಟಪುರ ಪೊಲೀಸರು, ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News