ಮಾಧ್ಯಮ ಅಕಾಡೆಮಿಗೆ ಅಧಿಕಾರೇತರ ಸದಸ್ಯರ ನೇಮಕ
ಬೆಂಗಳೂರು, ಆ.7: ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧಿಕಾರೇತರ ಸದಸ್ಯರುಗಳನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಎಚ್.ಬಿ.ಮದನಗೌಡ(ಪ್ರಧಾನ ಸಂಪಾದಕರು, ಜನಮಿತ್ರ ಕನ್ನಡ ದಿನಪತ್ರಿಕೆ), ಎಚ್.ಆರ್.ರವೀಶ್(ಹಿರಿಯ ವರದಿಗಾರರು, ಉದಯ ಟಿ.ವಿ), ಎನ್.ರವಿ ಕುಮಾರ್ (ಸಂಪಾದಕರು, ಶಿವಮೊಗ್ಗ ಟೆಲೆಕ್ಸ್), ನಿಂಗಪ್ಪ ಎಚ್.ಚಾವಡಿ(ವ್ಯವಸ್ಥಾಪಕ ಸಂಪಾದಕರು, ಮೂಡಣ ಕನ್ನಡ ದಿನಪತ್ರಿಕೆ), ಕೆ.ಎಸ್. ಗಣೇಶ್(ಜಿಲ್ಲಾ ವರದಿಗಾರರು, ಉದಯವಾಣಿ, ಕೋಲಾರ), ಎಂ.ಯು.ವೆಂಕಟೇಶಯ್ಯ(ಸಂಪಾದಕರು, ಗ್ರಾಮೀಣ ಸಿಂಹ), ಗಣೇಶ್ ಕದಮ್(ವರದಿಗಾರರು, ಸಂಜೆವಾಣಿ).
ಗಂಗಾಧರ ಹಿರೇಗುತ್ತಿ(ಸಂಪಾದಕರು, ಕರಾವಳಿ ಮಂಜಾವು), ಎನ್. ನಾಗರಾಜು(ಸಂಪಾದಕರು, ಈಶಾನ್ಯಟೈಮ್ಸ್), ರಾಜಶೇಖರ ಕೋಟಿ (ಸಂಪಾದಕರು, ಆಂದೋಲನ ದಿನಪತ್ರಿಕೆ) ಹಾಗೂ ಬೆಂಗಳೂರು, ಮಂಗಳೂರು ಮತ್ತು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಮುಖ್ಯಸ್ಥರುಗಳು ಹಾಗೂ ಬೆಂಗಳೂರು ಆಕಾಶವಾಣಿ ನಿಲಯದ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕರು ಹಾಗೂ ಕರ್ನಾಟಕ ಮಾದ್ಯಮ ಅಕಾಡೆಮಿ ಕಾರ್ಯದರ್ಶಿಗಳು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.