ಸೌದಿ: ಖರ್ಜೂರ ಉತ್ಸವ ಆರಂಭ

Update: 2017-08-08 17:07 GMT

ರಿಯಾದ್, ಆ. 8: ಸೌದಿ ಅರೇಬಿಯದ ಖಾಸಿಮ್ ಪ್ರಾಂತದ ಬುರೈಡಾದಲ್ಲಿ ನಡೆಯುವ ವಾರ್ಷಿಕ 45 ದಿನಗಳ ‘ಖರ್ಜೂರ ಉತ್ಸವ’ ಶನಿವಾರ ಆರಂಭಗೊಂಡಿದೆ.

ಈ ಉತ್ಸವವು ವಾರ್ಷಿಕ ಸಂತೆ ಮಾತ್ರ ಆಗಿರದೆ, ಸಾವಿರಾರು ರೈತರು ಮತ್ತು ಯುವಕರ ಜೀವನಾಧಾರವಾಗಿದೆ. ಈ ರೈತರು ಮತ್ತು ಯುವಕರು ಖರ್ಜೂರ ಕೃಷಿಯಿಂದ ಬರುವ ವರಮಾನದಿಂದಲೇ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ಖರ್ಜೂರ ಮರಗಳು ಸೌದಿ ಅರೇಬಿಯದಲ್ಲಿವೆ. ಜಗತ್ತಿನ ಒಟ್ಟು ಖರ್ಜೂರ ಉತ್ಪನ್ನದ 25 ಶೇಕಡ ಇಲ್ಲೇ ಉತ್ಪಾದನೆಯಾಗುತ್ತದೆ. ಖಾಸಿಮ್ ವಲಯವೊಂದರಲ್ಲೇ ಸುಮಾರು 70 ಲಕ್ಷ ಖರ್ಜೂರ ಮರಗಳಿವೆ. ಇದು ಸೌದಿ ಅರೇಬಿಯದ ಇತರ ಯಾವುದೇ ಪ್ರಾಂತಗಳು ಹೊಂದಿರುವ ಮರಗಳ ಸಂಖ್ಯೆಗಿಂತ ಅಧಿಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News