ಔಷಧಗಳ ಸುಲಭ ಲಭ್ಯತೆಗೆ ಕ್ರಮ: ಸರಕಾರದ ಹೇಳಿಕೆ

Update: 2017-08-08 17:19 GMT

ಹೊಸದಿಲ್ಲಿ, ಆ.8: ಜನರಿಗೆ ಸುಲಭದಲ್ಲಿ ಮತ್ತು ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಲಭ್ಯವಾಗಿಸುವ ಸರಕಾರದ ನಿರ್ಧಾರಕ್ಕೆ ಪೂರಕವಾಗಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸರಕಾರ ತಿಳಿಸಿದೆ.

ಜನತೆಗೆ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ಮತ್ತು ಸುಲಭದಲ್ಲಿ ಲಭ್ಯವಾಗುವಂತೆ ಖಾತರಿ ಪಡಿಸಿಕೊಳ್ಳಲು ಜಂಟಿ ಕಾರ್ಯದರ್ಶಿ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯ ಸಹಾಯಕ ಸಚಿವ ಮನ್‌ಸುಖ್ ಎಲ್.ಮಾಂಡವೀಯ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ . ಸಮಿತಿಯು ಬಡ ರೋಗಿಗಳಿಗೆ ಅನುಕೂಲವಾಗುವಂತೆ ಔಷಧದ ಬೆಲೆ ನಿಗದಿಪಡಿಸಲು ಸಲಹೆ ನೀಡಲಿದೆ. ಅಲ್ಲದೆ ಔಷಧ ಬೆಲೆ ಆದೇಶ 2013ರ ವ್ಯಾಪ್ತಿಯ ಬಗ್ಗೆ ಮರುಪರಿಶೀಲಿಸಲಿದೆ ಮತ್ತು ಆದೇಶದಲ್ಲಿ ಅಳವಡಿಸಲಾಗಿರುವ ನಿಯಂತ್ರಣ ನಿಯಮವನ್ನು ಬಲಪಡಿಸುವ ಕ್ರಮದ ಬಗ್ಗೆ ಸಲಹೆ ನೀಡಲಿದೆ. ಸರಕಾರದ ಕಾರ್ಯನೀತಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ಮತ್ತು ಹೆಚ್ಚಿನ ಪಾರದರ್ಶಕತೆ ಅಳವಡಿಸಿಕೊಂಡು ವಿವಾದ ಮತ್ತು ಪರಿಶೀಲನೆಯ ಕುರಿತಾದ ಪ್ರಕರಣಗಳನ್ನು ಕಡಿಮೆಗೊಳಿಸುವ ಕುರಿತು ಸಮಿತಿ ಸಲಹೆ ನೀಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News