ಮಾಜಿ ಕೋಚ್ ಅನಿಲ್ ಕುಂಬ್ಳೆಗೆ 1 ಕೋಟಿ ರೂ. ಪಾವತಿಸಿದ ಬಿಸಿಸಿಐ

Update: 2017-08-08 18:30 GMT

ಹೊಸದಿಲ್ಲಿ, ಆ.8: ಟೀಮ್ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆಗೆ ಬಾಕಿ ಉಳಿದಿದ್ದ 1 ಕೋಟಿ ರೂ. ವೇತನವನ್ನು ಬಿಸಿಸಿಐ ಕೊನೆಗೂ ಪಾವತಿಸಿದೆ.

ಬಿಸಿಸಿಐ 25 ಲಕ್ಷ ರೂ. ಅಧಿಕ ಯಾರಿಗೆಲ್ಲಾ ಪಾವತಿಸಿದೆಯೋ ಅವರ ಹೆಸರನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಕುಂಬ್ಳೆಗೆ ಮೇ ಮತ್ತು ಜೂನ್ ತಿಂಗಳ ವೃತ್ತಿಪರ ವೇತನ ಸುಮಾರು 48.75 ಲಕ್ಷ ರೂ.ಗಳನ್ನು ಬಿಸಿಸಿಐ ಪಾವತಿಸಿದೆ.

ಲಂಡನ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡ ಪಾಕಿಸ್ತಾನ ವಿರುದ್ಧ ಸೋಲು ಅನುಭವಿಸಿದ ಬೆನ್ನಲ್ಲೇ ಕುಂಬ್ಳೆ ಅವರು ಟೀಮ್ ಇಂಡಿಯಾದ ಸಂಬಂಧ ಕಡಿದುಕೊಂಡಿದ್ದರು. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾದೊಂದಿಗೆ ತೆರಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದರು.

ಕುಂಬ್ಳೆ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಕೋಚ್ ಆಗಿ ನೇಮಕಗೊಂಡಿದ್ದರು. ಅವರು 2019ರ ವಿಶ್ವಕಪ್ ತನಕ ಟೀಮ್ ಇಂಡಿಯಾದ ಕೋಚ್ ಆಗಿರುತ್ತಾರೆ.

ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಎರಡನೆ ಸ್ಥಾನ ಪಡೆದ ಭಾರತದ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ತಲಾ 45 ಲಕ್ಷ ರೂ.ವೇತನವನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

ಮಾಜಿ ಆಟಗಾರರಿಗೆ ಒಂದೇ ಬಾರಿ ಆರ್ಥಿಕ ನೆರವು ನೀಡುವ ಯೋಜನೆಯಲ್ಲಿ ಮಾಜಿ ಆಟಗಾರರಾದ ವಿವೇಕ್ ರಾಝ್ದನ್ , ಸರಣ್‌ದೀಪ್ ಸಿಂಗ್, ಸಲೀಲ್ ಅಂಕೋಲಾ, ರಿತೀಂದರ್ ಸೋಧಿ, ಯೋಗರಾಜ್ ಸಿಂಗ್ ಮತ್ತು ರಾಬಿನ್ ಸಿಂಗ್ ಅವರಿಗೆ ತಲಾ 35 ಲಕ್ಷ ರೂ. ಬಿಡುಗಡೆಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News