ಮಸ್ಕತ್: ಯುವತಿಯನ್ನು ಕಟ್ಟಿಹಾಕಿ ಹಣ ದೋಚಿದ ವ್ಯಕ್ತಿಯ ಬಂಧನ

Update: 2017-08-09 07:45 GMT

ಮಸ್ಕತ್,ಆ.9: ಯುವತಿಯನ್ನು ಮನೆಯಲ್ಲಿ ಕಟ್ಟಿಹಾಕಿ 17,000 ರಿಯಾಲ್ ದೋಚಿದ ವ್ಯಕ್ತಿಯನ್ನು ಪೊಲೀಸರು  ಬಂಧಿಸಿದ್ದಾರೆ. ಏಷ್ಯನ್ ಮೂಲದ ಆರೋಪಿ ಕೃತ್ಯವೆಸಗಿದ ಬಳಿಕ ಒಮನ್ ತೊರೆಯಲು ಪ್ರಯತ್ನಿಸುತ್ತಿದ್ದ ವೇಳೆ  ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಯುವತಿ ವಾಸವಿದ್ದ ಸ್ಥಳಕ್ಕೆ ನುಗ್ಗಿದ್ದ ಆರೋಪಿ, ಯುವತಿಯ ಕೈಕಾಲು ಕಟ್ಟಿಹಾಕಿ ಹಣವನ್ನು ದೋಚಿ ಪರಾರಿಯಾಗಿದ್ದನು.

ಆರೋಪಿ ಮತ್ತು ಯುವತಿ ಯಾವ ದೇಶಕ್ಕೆ ಸೇರಿದವರೆನ್ನುವ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಕೃತ್ಯದ ವಿವರ ಅರಿತು ದಕ್ಷಿಣ ಬಾತಿನ ಹಾಗೂ ಬರ್ಕ ಪೊಲೀಸ್ ಠಾಣೆಯ ಅಪರಾಧ ತನಿಖಾ ವಿಭಾಗ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು  ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಆರೋಪಿಯನ್ನು ಮುಂದಿನ ಕ್ರಮ ಜರಗಿಸಲಿಕ್ಕಾಗಿ ಪಬ್ಲಿಕ್ ಪ್ರಾಸಿಕ್ಯೂಶನ್‍ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News