200 ಮೀ. ಓಟ: ಐಸಾಕ್ ಮಕ್ವಾಲ ಫೈನಲ್‌ಗೆ

Update: 2017-08-10 18:48 GMT

ಲಂಡನ್, ಆ.10: ಅತ್ಯಂತ ಅಪರೂಪದ ಸನ್ನಿವೇಶದಲ್ಲಿ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸಂಸ್ಥೆಯ ಅನುಮತಿಯ ಬಳಿಕ ಪುರುಷರ 200 ಮೀ. ಓಟದಲ್ಲಿ ಒಂಟಿಯಾಗಿ ಓಡಿದ ಬೋಟ್ಸ್‌ವಾನಾದ ಓಟಗಾರ ಐಸಾಕ್ ಮಕ್ವಾಲ ಫೈನಲ್‌ಗೆ ತಲುಪಿದ್ದಾರೆ.

ವೈದ್ಯಕೀಯ ಕಾರಣಕ್ಕಾಗಿ ಮಕ್ವಾನಾಗೆ ಸೋಮವಾರ ನಡೆದ 200 ಮೀ. ಹೀಟ್ ಹಾಗೂ ಮಂಗಳವಾರ ನಡೆದ 400 ಮೀ. ಫೈನಲ್‌ನಲ್ಲಿ ಭಾಗವಹಿಸದಂತೆ ಐಎಎಎಫ್ ನಿರ್ಬಂಧ ಹೇರಿತ್ತು.

30ರ ಹರೆಯದ ಆಫ್ರಿಕದ ಓಟಗಾರ ಮಕ್ವಾನಾ ಎರಡು ಸ್ಪರ್ಧೆಗಳಲ್ಲಿ ಪ್ರಮುಖ ಸ್ಪರ್ಧಿಯಾಗಿದ್ದರು. ಸ್ಪರ್ಧೆಯ ಆರಂಭಕ್ಕೆ ಮೊದಲು ವಾಂತಿಯಿಂದ ಬಳಲುತ್ತಿದ್ದ ಮಕ್ವಾಲಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಐಎಎಎಫ್ ಅನುಮತಿ ನಿರಾಕರಿಸಿತ್ತು.

ಬುಧವಾರ ಸಂಜೆ 200 ಮೀ. ಓಟದ ಸೆಮಿಫೈನಲ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದ ಮಕ್ವಾನಾ 20.54 ಸೆಕೆಂಡ್‌ನಲ್ಲಿ ಗುರಿ ತಲುಪಿ ಫೈನಲ್‌ಗೆ ತಲುಪಿದರು.

 ‘‘ವೈದ್ಯಕೀಯ ಪರೀಕ್ಷೆಯ ಬಳಿಕ ಮಕ್ವಾಲ ಸ್ಪರ್ಧಿಸಲು ಫಿಟ್ ಆಗಿದ್ದಾರೆಂದು ಘೋಷಿಸಲ್ಪಟ್ಟಿದ್ದರು. ಬೊಟ್ಸ್‌ವಾನಾ ಅಥ್ಲೆಟಿಕ್ಸ್ ಸಂಸ್ಥೆಯ ಲಿಖಿತ ಕೋರಿಕೆಯ ಬಳಿಕ ನಾವು ಕೂಡ ನಿಯಮದ ಪ್ರಕಾರ ಅವರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದೇವೆ ಎಂದು ಐಎಎಎಫ್ ತಿಳಿಸಿದೆ.

ನನಗೆ ಮತ್ತೊಂದು ಅವಕಾಶ ನೀಡಿದ್ದ ಐಎಎಎಫ್‌ಗೆ ನಾನು ಆಭಾರಿಯಾಗಿರುವೆ. ಲಂಡನ್‌ನ ಪ್ರೇಕ್ಷಕರು ಅಪೂರ್ವ ಬೆಂಬಲ ನೀಡಿದರು ಎಂದು ಮಕ್ವಾಲಬಿಬಿಸಿ ಸ್ಪೋರ್ಟ್ಸ್‌ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News