×
Ad

ಐದು ಮಂದಿಗೆ ಬೆಂಗಳೂರು ವಿವಿ ಪಿಎಚ್‌ಡಿ ಪ್ರದಾನ

Update: 2017-08-12 18:22 IST

ಬೆಂಗಳೂರು, ಆ. 12: ಬೆಂಗಳೂರು ವಿಶ್ವವಿದ್ಯಾಲಯ ಐದು ಮಂದಿ ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿದ ಪ್ರಬಂಧಗಳಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಸಿ.ಗಂಗಾರೆಡ್ದಿ: ಎಚ್‌ಸಿಎಲ್ ಟೆಕ್ನಾಲಜೀಸ್‌ನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಗಂಗಾರೆಡ್ಡಿ, ಮಂಡಿಸಿದ ಎಲಾಸ್ಟೊ -ಪ್ಲಾಸ್ಟಿಕ್ ಅನಾಲಿಸಿಸ್ ಫಾರ್ ಎಸ್ಟಾಬ್ಲಿಸಿಂಗ್ ಅಲ್ಟಿಮೇಟ್ ಲೋಡ್ ಕ್ಯಾರಿಯಿಂಗ್ ಕೆಪಾಸಿಟಿ ಆಂಡ್ ಮೆಟಾಲಿಕ್ ಏರ್‌ಕ್ರಾ್‌ಟ ಸ್ಟ್ರಕ್ಚರಲ್ ಮೆಂಬರ್ಸ್‌’ ಎಂಬ ಪ್ರಬಂಧಕ್ಕೆ ಪಿಎಚ್‌ಡಿ ನೀಡಿದೆ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಯಾಂತ್ರಿಕ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಾಂತರಾಜ ಮಾರ್ಗದರ್ಶಕರಾಗಿದ್ದರು.

ಆರ್.ಮುನಿಲಕ್ಷ್ಮಿ:  ಬೆಂ.ವಿವಿ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಮುನಿಲಕ್ಷ್ಮಿ ಆರ್. ಇವರು ಮಂಡಿಸಿದ ‘ಎ ಸ್ಟಡಿ ಆನ್ ಕಮಾಡಿಟಿ ಮಾರ್ಕೆಟ್ ವಿತ್ ಸ್ಪೆಷಲ್ ರೆೆರೆನ್ಸ್ ಟು ರೀಜನಲ್ ಕಮಾಡಿಟೀಸ್ ಎಕ್ಸ್‌ಚೇಂಜಸ್ ಇನ್ ಇಂಡಿಯಾ’ ಎಂಬ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ನೀಡಿದೆ. ಇವರಿಗೆ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಕೆ.ನಿರ್ಮಲ ಮಾರ್ಗದರ್ಶಕರಾಗಿದ್ದರು.

ಗಣೇಶ್ ಎಸ್.ಆರ್.:  ಬೆಂ. ವಿವಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಗಣೇಶ್ ಎಸ್.ಆರ್. ಇವರು ಮಂಡಿಸಿದ ‘ಅಡಾಪ್ಷನ್ ಆಂಡ್ ಇಂಟರ್‌ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಸ್ಟಾಂಡರ್ಡ್ಸ್ ಅಂಡ್ ಇಟ್ಸ್ ರೋಲ್ ಇನ್ ಇಂಡಿಯನ್ ಅಕೌಂಟಿಂಗ್ ಸಿಸ್ಟಮ್-ಎಡೆನ್ಸ್ ್ರೊಮ್ ಸೆಲೆಕ್ಟ್ ಎನ್.ಸಿ.ಇ. ಕಂಪೆನೀಸ್ ಇಮ್ ಇಂಡಿಯಾ’ ಎಂಬ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಮುನಿರಾಜು ಮಾರ್ಗದರ್ಶಕರಾಗಿದ್ದರು.

ರವಿ:  ಬೆಂಗಳೂರು ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ರವಿ ಎಂ.ವಿ., ಇವರು ಮಂಡಿಸಿದ ‘ಟ್ಯಾಕ್ಸ್ ರಿಾರ್ಮ್ಸ್ ಇನ್ ಇಂಡಿಯಾ ಪೊಟೆನ್ಷಿಯಲ್ ಚಾಲೆಂಜಸ್ ವಿತ್ ಸ್ಪೆಷಲ್ ರೆೆರೆನ್ಸ್ ಟು ಡೈರೆಕ್ಟ್ ಟ್ಯಾಕ್ಸ್ ಕೋಡ್’ ಎಂಬ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ. ಇವರಿಗೆ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಎಂ.ರಾಮಚಂದ್ರಗೌಡ ಮಾರ್ಗದರ್ಶಕರಾಗಿದ್ದರು.

ಶಿವಮಂಜುನಾಥ: ಆಯುರ್ವೇದ ವಿಜ್ಞಾನ ಮತ್ತು ಸಂಶೋಧನ ವಿದ್ಯಾಲಯದ ದ್ರವ್ಯಗುಣ ವಿಜ್ಞಾನ ವಿಭಾಗ ಹಿರಿಯ ಸಸ್ಯಶಾಸ್ತ್ರಜ್ಞ ಶಿವಮಂಜುನಾಥ ಎಂ.ಪಿ. ಮಂಡಿಸಿದ ‘ಸ್ಟಡೀಸ್ ಆನ್ ಬಯೋಪ್ರಾಸ್ಪೆಕ್ಟೀಂಗ್ ಆಫ್ ಸೆಲೆಕ್ಟೆಡ್ ಎನ್‌ಡೇಂಜರ್ಡ್‌ ಟ್ಯಾಕ್ಸ್ ಫ್ರಮ್ ಕರ್ನಾಟಕ’ ಎಂಬ ಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ. ವಿವಿಯ ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಪಿ.ಶ್ರೀನಾಥ್ ಮಾರ್ಗದರ್ಶನ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News