ಶರವೇಗದ ಸರದಾರ ಬೋಲ್ಟ್​ ಸೋಲಿನೊಂದಿಗೆ ವಿದಾಯ

Update: 2017-08-13 08:39 GMT

ಲಂಡನ್, ಆ.13: ವಿಶ್ವದ ಶರ ವೇಗದ ಸರದಾರ  ಜಮೈಕಾದ  ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಷಿಪ್​ನಲ್ಲಿ ಸೋಲಿನೊಂದಿಗೆ ವಿದಾಯ ಹೇಳಿದ್ದಾರೆ.

ಶನಿವಾರ ​  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 4 x 100 ಮೀ. ರಿಲೇನಲ್ಲಿ ಉಸೇನ್​ ಬೋಲ್ಟ್ ಗಾಯಗೊಂಡ ಹಿನ್ನೆಲೆಯಲ್ಲಿ  ಅವರ  ಜಮೈಕಾ ತಂಡ ಸೋಲನುಭವಿಸಿತು. ಇದರೊಂದಿಗೆ ಕೊನೆಯ ಓಟದಲ್ಲಿ ಜಮೈಕಾ ತಂಡಕ್ಕೆ ಚಿನ್ನ ತಂದು ಕೊಡುವ  ಬೋಲ್ಟ್ ಕನಸು ಈಡೆರಲಿಲ್ಲ.

4 x 100 ಮೀ. ರಿಲೇನಲ್ಲಿ ಗ್ರೇಟ್ ಬ್ರಿಟನ್ ಚಿನ್ನ, ಅಮೆರಿಕ ಬೆಳ್ಳಿ ಮತ್ತು ಜಪಾನ್ ಬೆಳ್ಳಿ ಗೆದ್ದುಕೊಂಡಿತು

ಕಳೆದ ವಾರ ಉಸೇನ್​ ಬೋಲ್ಟ್​ 100 ಮೀಟರ್​ ಓಟದ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ  ಕಂಚು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News