ಬ್ರಿಟನ್‌ನ ಮುಹಮ್ಮದ್ ಫರ್ಹಾ ವಿದಾಯ

Update: 2017-08-13 18:48 GMT

ಲಂಡನ್, ಆ.13: ಬ್ರಿಟನ್‌ನ ಮುಹಮ್ಮದ್ ಫರ್ಹಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 5,000 ಮೀಟರ್ ಓಟದಲ್ಲಿ ಬೆಳ್ಳಿ ಜಯಿಸುವುದರೊಂದಿಗೆ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

ಇದರೊಂದಿಗೆ ವಿಶ್ವ ವೇಗದ ಸರದಾರ ಜಮೈಕಾದ ಉಸೇನ್ ಬೋಲ್ಟ್ ಮತ್ತು ಫರ್ಹಾ ಒಟ್ಟಿಗೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. 34ರ ಹರೆಯದ ಫರ್ಹಾ ಕಳೆದ ವಾರ 10,000 ಮೀಟರ್ ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು. 5,000 ಮೀಟರ್‌ನಲ್ಲೂ ಚಿನ್ನ ಗೆಲ್ಲುವ ಯೋಜನೆ ಹಾಕಿಕೊಂಡಿದ್ದರು. ಆದರೆ ಅವರಿಗೆ ಬೆಳ್ಳಿ ದೊರೆಯಿತು.

ಜಾಗತಿಕ ಚಾಂಪಿಯನ್‌ಶಿಪ್‌ನಲ್ಲಿ ಫರ್ಹಾ ಈ ತನಕ 10 ಚಿನ್ನ ಜಯಿಸಿದ್ದರು. ಒಲಿಂಪಿಕ್ಸ್‌ನಲ್ಲಿ 4 ಚಿನ್ನ ಜಯಿಸಿದ್ದ ಫರ್ಹಾ ಅವರು ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಈ ತನಕ 6 ಚಿನ್ನ ಗೆದ್ದುಕೊಂಡಿದ್ದಾರೆ. 2 ಬೆಳ್ಳಿ ಪಡೆದಿದ್ದಾರೆ.

  ಅಥ್ಲೆಟಿಕ್ಸ್ ಚಾಂಪಿಯನ್ಸ್‌ನ 5,000 ಮೀಟರ್ ಓಟದಲ್ಲಿ ಫರ್ಹಾ (13:33.22)ಅವರನ್ನು ಹಿಂದಿಕ್ಕಿದ ಇಥಿಯೋಪಿಯದ ಮುಕ್ತಾರ್ ಇದ್ರೀಸ್ (13:32.79) ಚಿನ್ನ ಪಡೆದರು. ಅಮೆರಿಕದ ಪೌಲ್ ಚೆಲಿಮೊ(13:33.30) ಕಂಚು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News