×
Ad

ಅನೈತಿಕ ಸಂಬಂಧ ಆರೋಪ: ವಿಧವೆ ಕೊಲೆ

Update: 2017-08-14 20:02 IST

ಬೆಂಗಳೂರು, ಆ.14: ವಿಧವೆ ಮಹಿಳೆಯೊಬ್ಬರನ್ನು ಅಡುಗೆ ಭಟ್ಟನೋರ್ವ ಕೊಲೆಗೈದು ಪರಾರಿಯಾಗಿರುವ ಆರೋಪ ಇಲ್ಲಿನ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿಬಂದಿದೆ.

ಯಶವಂತಪುರದ ರೈಲ್ವೆ ನಿಲ್ದಾಣದ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಹನುಮಕ್ಕ ಯಾನೆ ಅನಿತಾ(35) ಎಂಬಾಕೆ ಕೊಲೆಯಾದ ಮಹಿಳೆ ಎಂದು ಪೊಲೀಸರು ಗುರುತಿಸಿದ್ದಾರೆ.

ಅನಿತಾ ಪತಿ ಹತ್ತು ವರ್ಷಗಳ ಹಿಂದೆ ಮೃತಪಟ್ಟ ನಂತರ ಕೆಲಸ ಅರಸಿ ನಗರಕ್ಕೆ ಬಂದಿದ್ದರು. ಯಶವಂತಪುರದ ರೈಲ್ವೆ ನಿಲ್ದಾಣದ ಬಳಿಯ ಖಾಸಗಿ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದ ಆಕೆ ಮಗನೊಂದಿಗೆ ಮತ್ತಿಕೆರೆಯಲ್ಲಿ ವಾಸವಾಗಿದ್ದರು. ಈ ನಡುವೆ ಅಡುಗೆ ಭಟ್ಟ ಮಂಜುನಾಥ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಆಕೆ ಆಗಾಗ ಆತನ ಬಿ.ಕೆ. ನಗರದ ಮನೆಗೆ ಹೋಗಿಬರುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News