ಉದ್ಯಮಿ ಪುತ್ರಿಗೆ ಬೆದರಿಕೆ

Update: 2017-08-14 14:33 GMT

ಬೆಂಗಳೂರು, ಆ.14: ಉದ್ಯಮಿ ಪುತ್ರಿಯೊಬ್ಬರ ನಗ್ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿ 32 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಆರೋಪಿಗಾಗಿ ಸಿಐಡಿ ಪೊಲೀಸರು ಪತ್ತೆಕಾರ್ಯ ನಡೆಸುತ್ತಿದ್ದಾರೆ.

ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರ ಪುತ್ರಿಯೊಬ್ಬರಿಗೆ ಕೆಲ ದಿನಗಳಿಂದ ಹಿಂದೆ ವಾಟ್ಸಪ್‌ನಲ್ಲಿ ದುಷ್ಕರ್ಮಿಯೋರ್ವ ಸಂದೇಶಗಳನ್ನು ಕಳುಹಿಸಿದ್ದಾನೆ. ಆ ಸಂದೇಶದಲ್ಲಿ ಉದ್ಯಮಿ ಪುತ್ರಿಯ ಚಿತ್ರಕ್ಕೆ ಮತ್ತೊರ್ವ ಯುವತಿಯ ನಗ್ನ ದೃಶ್ಯಗಳನ್ನು ಅಳವಡಿಸಿ, 32 ಲಕ್ಷ ರೂ. ಹಣ ನೀಡದಿದ್ದರೆ, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದ್ದಾನೆ ಎನ್ನಲಾಗಿದೆ. ಉದ್ಯಮಿಯು ಸಿಐಡಿ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News