21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

Update: 2017-08-14 15:21 GMT

ಬೆಂಗಳೂರು, ಆ.14: ವೃತ್ತಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ 21 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಲಭಿಸಿದೆ.

ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ: ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ನೆಲಮಂಗಲದ ಡಿವೈಎಸ್ಪಿ ಎ.ಬಿ.ರಾಜೇಂದ್ರ ಕುಮಾರ್ ಹಾಗೂ ಬೆಂಗಳೂರು ಸಿಐಡಿ ಎಎಸ್ಸೈ ಮುನಿಹನುಮಯ್ಯ ಆಯ್ಕೆಯಾಗಿದ್ದಾರೆ.

ರಾಷ್ಟ್ರಪತಿ ಪ್ರಶಂಸನೀಯ ಸೇವಾ ಪದಕ: ಕೊಡಗು ಎಸ್ಪಿ ಪಿ.ರಾಜೇಂದ್ರ ಪ್ರಸಾದ್, ಕಲಬುರ್ಗಿಯ ಕೆಎಸ್‌ಆರ್‌ಪಿ ವಿಭಾಗದ ಕಮಾಂಡರ್ ಬಸವರಾಜ್‌ಜಿಲ್ಲೆ, ಬೆಳಗಾವಿ ನಗರ ಸಂಚಾರ ಉಪವಿಭಾಗದ ಎಸಿಪಿ ಶಂಕರ್ ಕೆ.ಮರಿಹಾಳ್, ಬೆಂಗಳೂರು ಅರಣ್ಯ ಘಟಕ ಸಿಐಡಿ ಡಿವೈಎಸ್ಪಿ ಎ.ಆರ್.ಬಲರಾಮೇಗೌಡ, ಕೋಲಾರದ ಮುಳಬಾಗಿಲು ಉಪವಿಭಾಗ ಡಿವೈಎಸ್ಪಿ ಬಿ.ಕೆ.ಉಮೇಶ್.

ದಕ್ಷಿಣ ಕನ್ನಡ ಜಿಲ್ಲೆಯ ಎಸಿಬಿ ಠಾಣೆಯ ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ, ಬೆಂಗಳೂರು ನಗರ ವಿಭಾಗದ ಕೆಎಲ್‌ಎ ಡಿವೈಎಸ್ಪಿ ಬಸವರಾಜ್ ಆರ್.ಮುಗದುಮ್, ಕಲಬುರ್ಗಿ ಜಿಲ್ಲೆಯ ಶಹಬಾದ್ ಉಪವಿಭಾಗದ ಡಿವೈಎಸ್ಪಿ ಮಹೇಶ್ ಮೇಘಣ್ಣನವರ್, ಹುಬ್ಬಳ್ಳಿ ನಗರ ಕಸಬಾ ಠಾಣೆಯ ಪಿಐ ಮಾರುತಿ ಎಸ್.ಗುಲ್ಲಾರಿ.

ಬೆಂಗಳೂರು ಡಿಜಿ ನಿಯಂತ್ರಣ ಕೊಠಡಿಯ ಪಿಎಸ್ಸೈ ಗಂಗಾಧರ, ಬೆಂಗಳೂರು ಕೆಎಸ್‌ಆರ್‌ಪಿ ವಿಶೇಷ ಎಆರ್‌ಎಸ್ಸೈ ಕೆ.ಎ.ಶಿವರಾಮ, ಮೈಸೂರಿನ ಡಿಎಆರ್‌ನ ಎಆರ್‌ಎಸ್ಸೈಗಳಾದ ಮುನಿಸ್ವಾಮಿ ಬಾಬು ಹಾಗೂ ಶರವಣ್.

ಬೆಂಗಳೂರು ರಾಜ್ಯ ಗುಪ್ತಚರ ವಿಭಾಗದ ಮುಖ್ಯಪೇದೆ ಎನ್.ಎಸ್.ಐಯ್ಯಂಗಾರ್ ರಾಜು, ಕೆಎಸ್‌ಆರ್‌ಪಿ ವಿಶೇಷ ಆರ್‌ಎಚ್‌ಸಿ ಬಿ.ನಾರಾಯಣ್‌ರಾವ್, ಕಲಬುರ್ಗಿ ಜಿಲ್ಲೆಯ ಡಿಪಿಓ ಡಿಎಸ್‌ಬಿ ಕೆ.ಅನಂತ್‌ರಾವ್ ಹಾಗೂ ಧಾರವಾಡದ ಐಎಸ್‌ಡಿ ಸಿಪಿಸಿ ಅಬ್ದುಲ್ ಸತ್ತಾರ್ ಎ.ಮಿರ್ಜಿ ಆಯ್ಕೆಯಾಗಿರುವುದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News