ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಧ್ವಜಾರೋಹಣ ಮಾಡಿದ ಮೋಹನ್ ಭಾಗವತ್

Update: 2017-08-15 07:13 GMT

ತಿರುವನಂತಪುರ, ಆ.15: ಜಿಲ್ಲಾಡಳಿತದ ಆದೇಶವನ್ನು ಧಿಕ್ಕರಿಸಿದ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಮಂಗಳವಾರ ಪಾಲಕ್ಕಾಡ್ ಜಿಲ್ಲೆಯ ಸರಕಾರಿ ಅನುದಾನಿತ ಶಾಲೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ.

 ಶಾಲಾ ಮುಖ್ಯೋಪಾಧ್ಯಾಯರು ಅಥವಾ ಚುನಾಯಿತ ಜನಪ್ರತಿನಿಧಿಗಳು ಮಾತ್ರ ಧ್ವಜಾರೋಹಣ ಮಾಡಬೇಕು. ಮೋಹನ್ ಭಾಗವತ್ ಧ್ವಜಾರೋಹಣ ಮಾಡಬಾರದು ಎಂದು ಪಾಲಕ್ಕಾಡ್ ಜಿಲ್ಲಾಧಿಕಾರಿ ಮೇರಿ ಕುಟ್ಟಿ ಲಿಖಿತ ಆದೇಶದ ಮೂಲಕ ಶಾಲೆಗೆ ತಿಳಿಸಿದ್ದರು.

ಪ್ರತಿಯೊಬ್ಬರಿಗೂ ತ್ರಿವರ್ಣಧ್ವಜ ಹಾರಿಸುವ ಹಕ್ಕಿದೆ ಎಂದು ವಾದಿಸಿರುವ ಆರೆಸ್ಸೆಸ್ನ ಹಿರಿಯ ಮುಖಂಡ ಭಾಗವತ್, ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿ ಮಂಗಳವಾರ ಬೆಳಗ್ಗೆ ಧ್ವಜಾರೋಹಣ ಮಾಡಿದರು.

ಭಾಗವತ್ ಕಳೆದ ಕೆಲವು ದಿನಗಳಿಂದ ಪಾಲಕ್ಕಾಡ್‌ನಲ್ಲಿದ್ದು, ಆರೆಸ್ಸೆಸ್ನ ಸಭೆಯಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News