ಕೇರಳ: 1947ರಲ್ಲಿ ಹುಟ್ಟಿದವರಿಗೆ ಒಂದು ವಾರ ಮೆಟ್ರೊದಲ್ಲಿ ಉಚಿತ ಪ್ರಯಾಣ

Update: 2017-08-15 11:45 GMT

ಕೊಚ್ಚಿ,ಆ.15: 1947ರಲ್ಲಿ ಹುಟ್ಟಿದವರಿಗೆ ಕೊಚ್ಚಿ ಮೆಟ್ರೊದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ. ಸ್ವಾತಂತ್ರ್ಯದಿನದ ಪ್ರಯುಕ್ತ ಕೊಚ್ಚಿ ಮೆಟ್ರೊದಲ್ಲಿ  1947ರಲ್ಲಿ ಹುಟ್ಟಿದ ಹಿರಿಯ ನಾಗರಿಕರಿಗೆ ಕೊಚ್ಚಿ ಮೆಟ್ರೊ ರೈಲು ಲಿಮಿಟೆಡ್(ಕೆ.ಎಂ.ಆರ್.ಎಲ್) ಒಂದು ವಾರದ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ.

ಪ್ರೀಡಂ ಡೇ ಎನ್ನುವ ಹೆಸರಿನಲ್ಲಿ  ಉಚಿತ ಪ್ರಯಾಣವನ್ನು ಮಂಗಳವಾರದಿಂದ 21 ತಾರೀಕಿನವರೆಗೆ ಈ ವಯೋಮಾನದವರು ನಡೆಸಬಹುದು. ವಯಸ್ಸಿನ ಗುರುತು ಚೀಟಿಯೊಂದಿಗೆ ಬರುವರಿಗೆ ಈ ಸೌಲಭ್ಯ ಲಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News