ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2017-08-15 12:47 GMT

ಸೌದಿ ಅರೇಬಿಯಾ, ಆ. 15: ಇಂಡಿಯಾ ಸೋಶಿಯಲ್ ಪೋರಂ, ಅ.ಭಾ. ಕರ್ನಾಟಕ ವಲಯದ ವತಿಯಿಂದ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ ಮತ್ತು ಪ್ರಸಕ್ತ ಭಾರತ ವಿಚಾರ ಸಂಕಿರಣ ಕಮೀಸ್ ಮುಶೈತ್ ನ ಜುಬಿಲಿ ರೆಸ್ಟೋರೆಂಟ್ ಆಡಿಟೋರಿಯಂನಲ್ಲಿ ನಡೆಯಿತು. 

ಕಾರ್ಯಕ್ರಮದ ಸಭಾಧ್ಯಕ್ಷರಾಗಿ ಇಂಡಿಯನ್ ಸೋಶಿಯಲ್ ಫೋರಮ್ ಅ.ಭಾ. ಕಮೀಸ್ ಚಾಪ್ಟರ್ ಅಧ್ಯಕ್ಷ  ಹನೀಫ್ ಮಂಜೇಶ್ವರ ಕಾರ್ಯ ನಿರ್ವಹಿಸಿದರು ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ದಮ್ಮಾಮ್ ಘಟಕದ ಅಧ್ಯಕ್ಷ ಎ ಎಂ ಆರೀಫ್ ಜೋಕಟ್ಟೆ, ಇಂಡಿಯನ್ ಫ್ರೆಟರ್ನಿಟಿ ಫೋರಮ್ ಅಭಾ ಖಮೀಸ್ ವಲಯಾಧ್ಯಕ್ಷ ಸಲೀಂ ಗುರುವಾಯನಕೆರೆ, ಇಂಡಿಯನ್ ಸೋಶಿಯಲ್ ಫೋರಮ್ ಇದರ ಪ್ರಾದೇಶಿಕ ಕಾರ್ಯದರ್ಶಿ ಮುಹಿಯುದ್ದೀನ್, ಇಂಡಿಯನ್ ಫ್ರೆಟರ್ನಿಟಿ ಫೋರಮ್ ಕಮೀಸ್ ಘಟಕದ ಅಧ್ಯಕ್ಷ ಸಮೀರ್ ಕೆ ಸಿ ರೋಡ್  ಉಪಸ್ಥಿತರಿದ್ದರು. 

'ಸ್ವತಂತ್ರ ಭಾರತ ಮತ್ತು ಪ್ರಸಕ್ತ ಭಾರತ' ಎಂಬ ವಿಷಯದ ಮೇಲೆ ವಿಚಾರವನ್ನು ಮಂಡಿಸಿದ ಎ ಎಂ ಆರೀಫ್ ಜೋಕಟ್ಟೆ, ಭಾರತ ಸ್ವತಂತ್ರವಾಗಿ ನಂತರದ ಸುಮಾರು ಏಳು ದಶಕಗಳಲ್ಲಿ ಸ್ವಾತಂತ್ರ್ಯದ ನೈಜ ಉದ್ದೇಶ ಈಡೇರಿಕೆಯಾಗಿಲ್ಲ ಈ ದೇಶದ ಅಲ್ಪಸಂಖ್ಯಾತರು ದಮನಿತರು ದಲಿತರು ಈಗಲೂ ಭಯದಿಂದ ಜೀವಿಸುವಂತಹ ಅಸಹಿಷ್ಣುತೆಯ ಪರಿಸ್ಥಿತಿ ಈ ದೇಶದಲ್ಲಿದೆ, ಮೂಲಭೂತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ, ಬಂಡವಾಳಶಾಹಿಗಳು ಮತ್ತು ಭ್ರಾಹ್ಮಣಶಾಹಿಗಳು ಮಾತ್ರ ಸ್ವಾತಂತ್ರ್ಯದ ಫಲವನ್ನು ಪಡೆಯುತ್ತಿದ್ದಾರೆ ಆದರೆ ಈ ದೇಶದ ಶೋಷಿತರು, ದಮನಿತರು, ಕಾರ್ಮಿಕರಿಗೆ ಅಲ್ಪಸಂಖ್ಯಾತರಿಗೆ ಸ್ವತಂತ್ರ ಮರೀಚಿಕೆಯಾಗಿದೆ ಎಂದರು.
ನಂತರ ಮಾತನಾಡಿದ ಸಲೀಂ ಗುರುವಾಯನಕೆರೆ, ಈ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅನಿವಾರ್ಯತೆ ಸೃಷ್ಟಿಯಾಗಿದೆ ಮತ್ತು ಸಂವಿಧಾನ ರಚಿಸಿರುವ ಡಾ ಅಂಬೇಡ್ಕರ್ ರವರ ಮಾತಿನ ಪ್ರಕಾರ ತುಳಿತಕ್ಕೊಳಗಾದ ಸಮುದಾಯಕ್ಕೆ ರಾಜಕೀಯ ಅಧಿಕಾರದ ಅಗತ್ಯವಿದೆ ಎಂದು ರಾಜಕೀಯ ಅಗತ್ಯತೆಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. 

ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರ ಆಶಾಕಿರಣವಾಗಿರುವ ಇಂಡಿಯನ್ ಸೋಶಿಯಲ್ ಫೋರಮ್ ನ ಸಮಾಜಮುಖಿ ಕಾರ್ಯಕ್ರಮಗಳನ್ನು ಮೆಚ್ಚಿ ಕೈ ಜೋಡಿಸುವ ಉದ್ದೇಶದಿಂದ ಹಲವಾರು ಅನಿವಾಸಿ ಭಾರತೀಯರು ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯತ್ವ ಪಡೆದುಕೊಂಡರು ಅವರನ್ನು ಇಂಡಿಯನ್ ಸೋಶಿಯಲ್ ಫೋರಮ್ ಅಭಾ ಕಮೀಸ್ ಚಾಪ್ಟರ್ ಅಧ್ಯಕ್ಷರಾದ ಹನೀಫ್ ಮಂಜೇಶ್ವರ, ಕಾರ್ಯದರ್ಶಿ ಸಾದಿಕ್ ಉಳ್ಳಾಲ್ ಆತ್ಮೀಯವಾಗಿ ಬರಮಾಡಿಕೊಂಡರು.

ಅಧ್ಯಕ್ಷೀಯ ಭಾಷಣದಲ್ಲಿ ಸ್ವಾತಂತ್ರೋತ್ಸವದ ಶುಭಾಶಯವನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ, ಅಭಾ ಕಮೀಸ್ ಚಾಪ್ಟರ್ ಅಧ್ಯಕ್ಷ ಹನೀಫ್ ಮಂಜೇಶ್ವರ ಕೋರಿದರು. ಇಂಡಿಯನ್ ಸೋಶಿಯಲ್ ಫೋರಮ್ ಅಭಾ ಘಟಕದ  ಕಾರ್ಯದರ್ಶಿ ಸಾದಿಕ್ ಉಳ್ಳಾಲ್ ಸ್ವಾಗತಿಸಿದರು, ತನ್ವಿರ್ ಮೈಂದಾಳ ವಂದಿಸಿದರು. ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯ ಆರಿಫ್ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.

Writer - ಶಾಹುಲ್ ಹಮೀದ್ ಕಾಶಿಪಟ್ನ

contributor

Editor - ಶಾಹುಲ್ ಹಮೀದ್ ಕಾಶಿಪಟ್ನ

contributor

Similar News